Categories: ಮಂಗಳೂರು

ನ್ಯೂಸ್‌ ಕರ್ನಾಟಕದ ವತಿಯಿಂದ ಮಾ.8 ರಂದು ʼಕುಕ್ಕಿಂಗ್‌ ವಿದೌಟ್‌ ಫೈರ್‌ʼ ಸ್ಪರ್ಧೆ

ಮಂಗಳೂರು: ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸುವ ದಿನವೇ ಮಾರ್ಚ್ 8 ರ ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಗಮನಿಸುತ್ತದೆ.

ಈ ದಿನವನ್ನು ಮಹಿಳೆಯರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಮಹಿಳೆಯರ ಸಮಾನ ಹಕ್ಕುಗಳು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆ ಮತ್ತು ಸಂತಾನೋತ್ಪತ್ತಿ ಹಕ್ಕುಗಳಂತಹ ವಿಷಯಗಳ ಬಗ್ಗೆ ಮಾತನಾಡುತ್ತದೆ.

ಇನ್ನು ಈ ನಿಟ್ಟಿನಲ್ಲಿ ಮಹಿಳೆಯರಿಗಾಗಿ ನ್ಯೂಸ್‌ ಕರ್ನಾಟಕದ ವತಿಯಿಂದ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗು ಫಿಝ್ಹಾ ಬೈ ನೆಕ್ಸಸ್ ಮಾಲ್‌ ನ ಸಹಯೋಗದೊಂದಿಗೆ ಮಾರ್ಚ್‌ 8 ರಂದು ಫಿಝ್ಹಾ ಬೈ ನೆಕ್ಸಸ್ ಮಾಲ್‌ ಪಾಂಡೇಶ್ವರ ಇಲ್ಲಿ “ಕೋಲ್ಡ್‌ ಬೌಲ್‌” ಎಂಬ ವಿಷಯದ ಮೇಲೆ ಕುಕ್ಕಿಂಗ್‌ ವಿದೌಟ್‌ ಫೈರ್‌ ಸ್ಪರ್ಧೆ(ಬೆಂಕಿಯಿಲ್ಲದೆ ಅಡುಗೆ) ಆಯೋಜಿಸಲಾಗಿದೆ.

ಸರಿಯಾಗಿ ಮಧ್ಯಾಹ್ನ 3:30ಕ್ಕೆ ಕುಕ್ಕಿಂಗ್‌ ವಿದೌಟ್‌ ಫೈರ್‌ ಸ್ಪರ್ಧೆ(ಬೆಂಕಿಯಿಲ್ಲದೆ ಅಡುಗೆ) ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಪ್ರಥಮ, ದ್ವಿತಿಯ ಹಾಗು ತೃತೀಯ ಬಹುಮಾನ, ಟ್ರೋಫಿ, ಪ್ರಮಾಣಪತ್ರ ವೋಚರ್‌ ನೀಡಲಾಗುತ್ತದೆ.

ಈ ಸ್ಪರ್ಧೇಯಲ್ಲಿ ಭಾಗವಹಿಸಲು ಕೆಲವು ನಿಬಂಧನೆಗಳಿವೆ. .
1. ಒಂದು ತಂಡದಲ್ಲಿ ಗರಿಷ್ಠ ಇಬ್ಬರು ಇರಬೇಕು
2. ಅಡುಗೆ ತಯಾರಿಗೆ 1 ಗಂಟೆ 30 ನಿಮಿಷ ಸಮಯವಕಾಶವಿರುತ್ತದೆ.
3. ಆಹಾರ ಪದಾರ್ಥಗಳನ್ನು ಬಿಸಿ ಮಾಡಲು ಅವಕಾಶ ಇರುವುದಿಲ್ಲ.
4. ಮುಂಚಿತವಾಗಿ ಅಡುಗೆ ತಯಾರಿಸಿ ತರುವಂತಿಲ್ಲ, ತರಕಾರಿಗಳನ್ನ ಕತ್ತರಿಸಿ ತರುವಂತಿಲ್ಲ.
5. ಇಲ್ಲಿ ಯಾವುದೇ ಎಲೆಕ್ಟ್ರಿಕಲ್‌ ವಸ್ತುಗಳ ಬಳಕೆಗೆ ಅವಕಾಶವಿರುವುದಿಲ್ಲ
6. ಅಡುಗೆ ತಯಾರಿಸುವ ಸ್ಥಳದಲ್ಲಿ ಶುಚಿತ್ವಕ್ಕೆ ಮೊದಲ ಆದ್ಯತೆ
7. ಕೊಟ್ಟ ಕಾಲಾವಕಾಶ ಮುಗಿದ ಬಳಿಕ ಅಡುಗೆ ಸ್ಥಳದಲ್ಲಿ ನಿಲ್ಲುವಂತಿಲ್ಲ.
8. ಇಲ್ಲಿ ಭಾಗವಹಿಸುವವರು ತಮ್ಮ ಹೆಸರು, ಸಂಸ್ಥೆಯ ಹೆಸರನ್ನು ಉಲ್ಲೇಖಿಸುವಂತಿಲ್ಲ.
9. ಪೌಷ್ಠಿಕತೆ, ಶುಚಿತ್ವ, ರುಚಿ ಹಾಗು ಪ್ರಸ್ತುತ ಪಡಿಸುವ ಬಗೆ ಪ್ರಮುಖವಾಗಿರುತ್ತದೆ.
10. ನಿರ್ಣಾಯಕರ ನಿರ್ಧಾರವೇ ಅಂತಿಮ
11. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಸಂಜೆ 3:30ರ ಒಳಗೆ ಸ್ಪರ್ಧಾ ಸ್ಥಳದಲ್ಲಿರಬೇಕು.
ಈ ಸ್ಪರ್ಧೆಗೆ ಉಚಿತ ಪ್ರವೇಶವಿರುತ್ತದೆ. ಆದರೆ ಮುಂಗಡ ನೋಂದಣಿ ಕಡ್ಡಾಯವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರತಿಮಾ ಪವಾರ್‌ ಅವರನ್ನು ಸಂಪರ್ಕಿಸಿ 76762018092

 

Ashitha S

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

1 hour ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

2 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

2 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

2 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

3 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

4 hours ago