Bengaluru 23°C
Ad

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಗೆ ಯಕ್ಷಧ್ರುವ ಕಲಾ ಗೌರವ

ಹಿರಿಯ ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಅವರು 2024 ಯಕ್ಷಧ್ರುವ ಕಲಾ ಗೌರವ ಪುರಸ್ಕಾರ ಪಡೆಯಲಿದ್ದಾರೆ. ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಪಟ್ಲ ಸಂಭ್ರಮದಲ್ಲಿ  ಚಿದಂಬರ ಬೈಕಂಪಾಡಿ ಕಲಾ ಗೌರವ ಪುರಸ್ಕಾರ ಸ್ವೀಕರಿಸಲಿದ್ದಾರೆ.

ಮಂಗಳೂರು: ಹಿರಿಯ ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಅವರು 2024 ಯಕ್ಷಧ್ರುವ ಕಲಾ ಗೌರವ ಪುರಸ್ಕಾರ ಪಡೆಯಲಿದ್ದಾರೆ. ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಪಟ್ಲ ಸಂಭ್ರಮದಲ್ಲಿ  ಚಿದಂಬರ ಬೈಕಂಪಾಡಿ ಕಲಾ ಗೌರವ ಪುರಸ್ಕಾರ ಸ್ವೀಕರಿಸಲಿದ್ದಾರೆ.

ಚಿದಂಬರ ಬೈಕಂಪಾಡಿ ಅವರು ವಡ್ಡರ್ಸೆ ರಘುರಾಮ ಶೆಟ್ಟಿಯವರ ಮುಂಗಾರು ಪತ್ರಿಕೆ, ಬಳಿಕ ಕನ್ನಡ ಪ್ರಭ ಹಾಗೂ ವಿವಿಧ ಮಾಧ್ಯಮದಲ್ಲಿ ದುಡಿದಿದ್ದಾರೆ.

40 ವರ್ಷಕ್ಕೂ ಮಿಕ್ಕಿ ಮಾಧ್ಯಮ ಕ್ಷೇತ್ರದಲ್ಲಿ ದುಡಿದಿರುವ ಚಿದಂಬರ್ ಬೈಕಂಪಾಡಿ ಅವರ ಹಿರಿತನ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾಗೌರವ ನೀಡಿ ಗೌರವಿಸುತ್ತಿದೆ.

Ad
Ad
Nk Channel Final 21 09 2023
Ad