Bengaluru 23°C
Ad

ಓವರ್ ಟೆಕ್ ವಿಚಾರ: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಚಾಕುವಿನಿಂದ ಹಲ್ಲೆ

ವಾಹನ ಓವರ್ ಟೆಕ್ ಮಾಡುವ ವಿಚಾರದಲ್ಲಿ ಟಾಟಾ ಏಸ್ ವಾಹನ ಚಾಲಕ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಡುವೆ ಜಗಳ ನಡೆದು ಬಸ್ ಚಾಲಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಾಬಸ್‌ಪೇಟೆ : ವಾಹನ ಓವರ್ ಟೆಕ್ ಮಾಡುವ ವಿಚಾರದಲ್ಲಿ ಟಾಟಾ ಏಸ್ ವಾಹನ ಚಾಲಕ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಡುವೆ ಜಗಳ ನಡೆದು ಬಸ್ ಚಾಲಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ ಶಿವಪ್ಪ ಮಡಿವಾಳ(40) ಹಲ್ಲೆಗೊಳಗಾದ ಚಾಲಕ. ಭಾಸ್ಕರ್‌ರೆಡ್ಡಿ (32) ಹಲ್ಲೆ ಮಾಡಿದ ವಾಹನ ಚಾಲಕ. ನಿನ್ನೆ ಬೆಳಗಿನ ಜಾವ 4.30 ಗಂಟೆಗೆ ಕೊಪ್ಪಳದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ಹಾಲು ಸಾಗಿಸುವ ಟಾಟಾ ಏಸ್ ಚಾಲಕನ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ದಾಬಸ್‌ಪೇಟೆ ಸಮೀಪದ ಮೇಲೆ ಜಗಳ ನಡೆದಿದೆ.

ನಂತರ ಟಾಟಾ ಏಸ್ ಚಾಲಕ ದಾಬಸ್‌ಪೇಟೆ ಬಳಿಯ ಪ್ಲೈ ಓವರ್ ರಸ್ತೆ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಅಡ್ಡಹಾಕಿದ್ದು, ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಬಸ್ ಚಾಲಕ ಶಿವಪ್ಪ, ವಾಹನ ಚಾಲಕ ಭಾಸ್ಕರ್ ರೆಡ್ಡಿಗೆ ಹಲ್ಲೆ ಮಾಡಿದ್ದರಿಂದ ಕೋಪಗೊಂಡ ಟಾಟಾ ಏಸ್ ಚಾಲಕ ವಾಹನದಲ್ಲಿದ್ದ ಚಾಕುವಿನಿಂದ ಬಸ್ ಚಾಲಕ ಶಿವಪ್ಪ ಮಡಿವಾಳರ ಹೊಟ್ಟೆಗೆ ತಿವಿದಿದ್ದಾನೆ.

ಕೂಡಲೇ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ನಿರ್ವಾಹಕರು, ಆರೋಪಿ ಭಾಸ್ಕರ್ ರೆಡ್ಡಿಯನ್ನು ಹಿಡಿದು ದಾಬಸ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಸ್ ಚಾಲಕನಿಗೆ ದಾಬಸ್‌ಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭಾಸ್ಕರರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad