ಇಲ್ಲೊಬ್ಬ ಕಂಪನಿಯಿಂದ 365 ದಿನಗಳ ಪಾವತಿ ರಜೆ ಪಡೆದಿದ್ದಾನೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೀನಾದ ಶೆನ್‌ಜೆನ್ ಪ್ರದೇಶದ ವ್ಯಕ್ತಿಯೊಬ್ಬ ಕಂಪನಿಯ ಪಾರ್ಟಿಯಲ್ಲಿ ಲಕ್ಕಿ ಡ್ರಾ ಗೆದ್ದ ಅನಂತರ 365 ದಿನಗಳ ವೇತನ ಸಹಿತ ರಜೆಯನ್ನು ಗಳಿಸಿದ್ದಾನೆ.
ಸಂಸ್ಥೆಯಲ್ಲಿ ನಡೆದ ಭಾನುವಾರದ ಭೋಜನ ಕೂಟದಲ್ಲಿ ಭಾಗವಹಿಸಿದ ಉದ್ಯೋಗಿ ಆ ರಾತ್ರಿ ದೊಡ್ಡ ಸೌಲಭ್ಯವನ್ನು ಪಡೆದನು. 365 ದಿನಗಳವರೆಗೆ ದೀರ್ಘ ರಜೆಯನ್ನು ನೀಡುವ ಚೆಕ್ ಅವರಿಗೆ ಸಿಕ್ಕಿತ್ತು. ಆ ಚೆಕ್‌ನಲ್ಲಿ “365 ದಿನಗಳ ಪಾವತಿಸಿದ ರಜೆ” ಎಂದು ಬರೆಯಲಾಗಿದೆ.
ಈ ಘಟನೆ ಕಳೆದ ವರ್ಷದ್ದು. ಆದರೂ ಅದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತರ ಉದ್ಯೋಗಿಗಳು ಆತನ ಬಗ್ಗೆ ಖಂಡಿತ ಅಸೂಯೆ ಪಟ್ಟಿರುತ್ತಾರೆ ಎಂದು ಹೇಳಿದ್ದಾರೆ. ಇನ್ನು ಕೆಲವರು “ನಮಗೆ ಅದು ಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಇಷ್ಟೊಂದು ರಜೆಯೇ ಎಂದು ಈ ಗೆಲುವಿನ ಬಗ್ಗೆ ಭಯ ವ್ಯಕ್ತಪಡಿಸಿದ್ದು, ಇದು ಅಪಾಯಕಾರಿ ಎಂದು ಹೇಳಿದ್ದಾರೆ. ಇದರಿಂದ ಉದ್ಯೋಗಿಗಳ ಉದ್ಯೋಗ ಭವಿಷ್ಯಕ್ಕೆ ಅಪಾಯ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಕಂಪೆನಿಯ ವಿಜೇತ ಉದ್ಯೋಗಿಗೆ ಪಾವತಿಸಿದ ರಜೆ ಮತ್ತು ಇನ್ನೊಂದು ವಿಶಿಷ್ಟ ಕೊಡುಗೆಯ ಬಗ್ಗೆ ಚರ್ಚಿಸಲು ತೀರ್ಮಾನಿಸಿತ್ತು. ಆತ ದೀರ್ಘವಾದ ರಜೆಯನ್ನು ಆನಂದಿಸುತ್ತಾನೋ ಅಥವಾ ಕೆಲಸ ಮಾಡುವ ಮೂಲಕ ಹಣವನ್ನು ಎನ್‌ಕ್ಯಾಶ್ ಮಾಡಲು ಬಯಸುತ್ತಾನೋ ಎಂಬ ಲೆಕ್ಕಾಚಾರ ಇದರಲ್ಲಿತ್ತು ಎನ್ನಲಾಗಿದೆ.