Bengaluru 27°C
Ad

ದೇಸಿ ಸ್ಟೈಲ್‌ನಲ್ಲಿ ಲುಂಗಿಯುಟ್ಟು ಲಂಡನ್‌ ರಸ್ತೆಯಲ್ಲಿ ಒಡಾಡಿದ ಯುವತಿ!

Lungi

ಲಂಡನ್‌: ಇತ್ತೀಚೆಗೆ ಯುವತಿಯೊಬ್ಬಳು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ ಲುಂಗಿಯಲ್ಲಿ ಲಂಡನ್‌ ಸ್ಟ್ರೀಟ್‌ನಲ್ಲಿ ಉಟ್ಟುಕೊಂಡು ಓಡಾಡಿದ್ದಾರೆ. ಈ ಮೂಲಕ ಯುವತಿ ವಿದೇಶಿ ನೆಲದಲ್ಲಿ ತಮ್ಮ ಪರಂಪರೆಯನ್ನು ಪ್ರದರ್ಶಿಸಿದರು. ಇನ್‌ಸ್ಟಾಗ್ರಾಂನಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ವಿದೇಶಿಗರು ಯುವತಿಯನ್ನು ಲುಂಗಿಯಲ್ಲಿ ನೋಡಿ ಆಶ್ಚರ್ಯ ಚಕಿತರಾದರು.

ದಕ್ಷಿಣಭಾರತದಲ್ಲಿ ತುಂಬಾ ಫೇಮಸ್ ಆಗಿರುವ ಬಟ್ಟೆಗಳ ವಿಧದಲ್ಲಿ ಒಂದು ಲುಂಗಿ. ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮಗಳಲ್ಲೂ ಜನರು ಲುಂಗಿ ಧರಿಸಿರುವುದನ್ನು ನೋಡಬಹುದು. ಆದರೆ ವಿದೇಶಿ ನೆಲದಲ್ಲಿ ಲುಂಗಿ ಉಟ್ಕೊಂಡು ಓಡಾಡಿದ್ರೆ ಹೇಗಿರುತ್ತೆ. ಅದನ್ನು ನೋಡಲೆಂದೇ ದಕ್ಷಿಣಭಾರತದ ಯುವತಿಯೊಬ್ಬಳು ಲಂಡನ್‌ನ ಬೀದಿಯಲ್ಲಿ ಲುಂಗಿ ಉಟ್ಕೊಂಡು ಓಡಾಡಿದರು.

ವೈರಲ್‌ ಆಗಿರೋ ವೀಡಿಯೋಗೆ ‘ಲಂಡನ್‌ನಲ್ಲಿ ಲುಂಗಿ ಧರಿಸುವುದು’ ಎಂದು ಶೀರ್ಷಿಕೆ ನೀಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರೋ ಈ ಕ್ಲಿಪ್ ಒಂದು ಮಿಲಿಯನ್ ವೀವ್ಸ್ ಮತ್ತು ಲೈಕ್ಸ್‌ಗಳನ್ನು ಗಳಿಸಿದೆ. ನೆಟ್ಟಿಗರು ಈ ವೀಡಿಯೋಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

https://www.instagram.com/reel/C63DADHqkrQ/?utm_source=ig_embed&utm_campaign=loading

Ad
Ad
Nk Channel Final 21 09 2023
Ad