Bengaluru 30°C
Ad

ವಿಶ್ವ ದಾಖಲೆ ಬರೆದ ವಿಶ್ವದ ಅತಿ ಎತ್ತರದ ಗೂಳಿ ರೋಮಿಯೋ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತವಾಗಿರುವ ರೋಮಿಯಾ ಹೆಸರಿನ ಗೂಳಿ ಇದೀಗ ಗಿನ್ನೆಸ್ ವಿಶ್ವ ದಾಖಲೆ ಪುಟವನ್ನು ಸೇರಿದೆ. ವಾಸ್ತವವಾಗಿ, 6 ವರ್ಷದ ಹೋಲ್‌ಸ್ಟೈನ್ ಸ್ಟೀರ್ ರೋಮಿಯೋ ಅನ್ನು ವಿಶ್ವದ ಅತಿ ಎತ್ತರದ ಬುಲ್ ಎಂದು ಪರಿಗಣಿಸಲಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತವಾಗಿರುವ ರೋಮಿಯಾ ಹೆಸರಿನ ಗೂಳಿ ಇದೀಗ ಗಿನ್ನೆಸ್ ವಿಶ್ವ ದಾಖಲೆ ಪುಟವನ್ನು ಸೇರಿದೆ. ವಾಸ್ತವವಾಗಿ, 6 ವರ್ಷದ ಹೋಲ್‌ಸ್ಟೈನ್ ಸ್ಟೀರ್ ರೋಮಿಯೋ ಅನ್ನು ವಿಶ್ವದ ಅತಿ ಎತ್ತರದ ಬುಲ್ ಎಂದು ಪರಿಗಣಿಸಲಾಗಿದೆ. ಅಮೆರಿಕದ ಒರೆಗಾನೋದ ಪ್ರಾಣಿಧಾಮದಲ್ಲಿರುವ ರೋಮಿಯೋ ವಿಶ್ವದ ಅತಿ ಎತ್ತರದ ಗೂಳಿ ಎಂದು ಖ್ಯಾತಿ ಪಡೆದಿದ್ದು, ಜನರು ಈ ಗೂಳಿಯನ್ನು ಕಂಡರೆ ಭಯಪಡುತ್ತಾರೆ.ಆದಾಗ್ಯೂ, ಈ ಗೂಳಿ ಸ್ವಭಾವತಃ ಶಾಂತ ಮತ್ತು ಸೌಮ್ಯ ಎಂದು ಹೇಳಲಾಗುತ್ತದೆ.

ಇದೀಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟ್ವಿಟರ್​​ ಖಾತೆಯಲ್ಲಿ ಈ ರೋಮಿಯೋ ಗೂಳಿಯ ಬಗ್ಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ‘1.94 ಮೀಟರ್ (6 ಅಡಿ 4.5 ಇಂಚು) ಎತ್ತರವಿರುವ ವಿಶ್ವದ ಅತಿ ಎತ್ತರದ ಗೂಳಿ ರೋಮಿಯೋ ಎಂದು ಕ್ಯಾಪ್ಷನ್​​ ಬರೆಯಲಾಗಿದೆ.ರೋಮಿಯೋ 6 ವರ್ಷದ ಹೋಲ್‌ಸ್ಟೈನ್ ಜಾತಿಯ ಗೂಳಿಯಾಗಿದ್ದು, ತನ್ನ ಮಾಲೀಕ ಮಿಸ್ಟಿ ಮೂರ್ ಜೊತೆ ವೆಲ್ಕಮ್ ಹೋಮ್ ಅನಿಮಲ್ ಅಭಯಾರಣ್ಯದಲ್ಲಿ ವಾಸಿಸುತ್ತಿದೆ

 

Ad
Ad
Nk Channel Final 21 09 2023
Ad