Bengaluru 23°C
Ad

ಶೆಡ್​ಗೆ ನುಗ್ಗಿದ ಖಾಸಗಿ ಕಂಪನಿ ಬಸ್: ನಾಲ್ವರು ಸ್ಥಳದಲ್ಲೇ ಮೃತ್ಯು

ರಸ್ತೆ ಬದಿಯ ಶೆಡ್​ಗೆ ಖಾಸಗಿ ಕಂಪನಿಯ ಬಸ್​ವೊಂದು ನುಗ್ಗಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ  ದಕ್ಷಿಣ ಗೋವಾದ ವೆರ್ನಾದಲ್ಲಿ ನಡೆದಿದೆ.

ಪಣಜಿ: ರಸ್ತೆ ಬದಿಯ ಶೆಡ್​ಗೆ ಖಾಸಗಿ ಕಂಪನಿಯ ಬಸ್​ವೊಂದು ನುಗ್ಗಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ  ದಕ್ಷಿಣ ಗೋವಾದ ವೆರ್ನಾದಲ್ಲಿ ನಡೆದಿದೆ.

ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರು ಬಿಹಾರ ಮೂಲದವರೆಂದು ತಿಳಿದು ಬಂದಿದ್ದು ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಖಾಸಗಿ ಕಂಪನಿಯೊಂದರ ​ಉದ್ಯೋಗಿಗಳಿದ್ದ ಬಸ್ ಅತಿ ವೇಗವಾಗಿ ಬಂದು ರಸ್ತೆ ಬದಿಯಲ್ಲಿದ್ದ ಶೆಡ್​​ಗಳಿಗೆ ನುಗ್ಗಿದೆ. ಇದರಿಂದ ಮನೆಯಲ್ಲಿ ಮಲಗಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಇನ್ನು ಉದ್ಯೋಗಿಗಳನ್ನ ಹತ್ತಿಸಿಕೊಂಡು ಬರುತ್ತಿದ್ದ ಬಸ್ ಚಾಲಕ ಮದ್ಯಪಾನ ಮಾಡಿದ್ದನು. ಹೀಗಾಗಿ ಬಸ್​ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಶೆಡ್​ಗಳಿಗೆ ನುಗ್ಗಿಸಿದ ಪರಿಣಾಮ ಸಾವಿಗೆ ಕಾರಣನಾಗಿದ್ದಾನೆ.

ಬಸ್​ ಒಳಗಿದ್ದ ಉದ್ಯೋಗಿಗಳಿಗೆ ಯಾವುದೇ ಗಾಯಗಳು ಆಗಿಲ್ಲ. ಬಸ್​ನ ಮುಂದಿನ ಭಾಗದ ಗ್ಲಾಸ್ ಒಡೆದು ಹೋಗಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad