Bengaluru 22°C
Ad

ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ: ಇನ್ನೂ ಧರ್ಮಸ್ಥಳಕ್ಕೆ ಆಗಮಿಸದ ಸಿಎಂ, ಡಿಸಿಎಂ ವಿರುದ್ಧ ಭಕ್ತರ ಆಕ್ರೋಶ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಮತ್ತು ಡಿಸಿಎಂ ಆಗಮನ ಹಿನ್ನೆಲೆ, ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅರ್ಧ ಗಂಟೆಯಿಂದ ನಿರ್ಬಂಧಿಸಲಾಗಿದೆ.

ಮಂಗಳೂರು:   ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಮತ್ತು ಡಿಸಿಎಂ ಆಗಮನ ಹಿನ್ನೆಲೆ, ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅರ್ಧ ಗಂಟೆಯಿಂದ ನಿರ್ಬಂಧಿಸಲಾಗಿದೆ.

ಆದರೆ ಇನ್ನೂ ಧರ್ಮಸ್ಥಳಕ್ಕೆ ಆಗಮಿಸದ ಸಿಎಂ, ಡಿಸಿಎಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ನಿಧಿ ಗೆಸ್ಟ್ ಹೌಸ್ ಗೆ ತೆರಳಿ ದೇವಸ್ಥಾನಕ್ಕೆ  ಸಿಎಂ ಆಗಮಿಸಲಿದ್ದಾರೆ ಆದರೆ ಅವಧಿಗೂ ಮುನ್ನವೇ ಭಕ್ತರ ದೇವರ ದರ್ಶನ ಬಂದ್ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದು ಸಿಎಂ ಹಾಗೂ ಪೊಲೀಸ್ ಇಲಾಖೆ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

Ad
Ad
Nk Channel Final 21 09 2023
Ad