Bengaluru 23°C
Ad

ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ದಾಳಿ ನಡೆಸಿದ ಮುಸ್ಲಿಂಮರು

ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ ಸರಗೋಧದಲ್ಲಿ ಅವರ ಶೂ ತಯಾರಿಸುವ ಕಾರ್ಖಾನೆಯನ್ನು ನೂರಾರು ಜನರು ಸುಟ್ಟು ಹಾಕಿರುವ ಘಟನೆ ಸರಗೋಧ ನಗರದ ಮುಜಾಹಿದ್ ಕಾಲೋನಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನ: ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ ಸರಗೋಧದಲ್ಲಿ ಅವರ ಶೂ ತಯಾರಿಸುವ ಕಾರ್ಖಾನೆಯನ್ನು ನೂರಾರು ಜನರು ಸುಟ್ಟು ಹಾಕಿರುವ ಘಟನೆ ಸರಗೋಧ ನಗರದ ಮುಜಾಹಿದ್ ಕಾಲೋನಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಸ್ಲಾಂ ಧರ್ಮವು ಪಾಕಿಸ್ತಾನದ ಅಧಿಕೃತ ಧರ್ಮವಾಗಿದ್ದರೂ ಇಲ್ಲಿ ಇತರ ಅಲ್ಪಸಂಖ್ಯಾತರೂ ಇದ್ದಾರೆ. ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ನೂರಾರು ಜನರು ಧರ್ಮನಿಂದೆಯ ಆರೋಪದ ಮೇಲೆ ಕ್ರಿಶ್ಚಿಯನ್ ಸಮುದಾಯದ ಮೇಲೆ ದಾಳಿ ನಡೆಸಿದರು.

ಗಲಭೆಕೋರರು ಪೊಲೀಸರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಹಿಂಸಾಚಾರದ ವೇಳೆ ಕನಿಷ್ಠ ಐವರನ್ನು ಅಧಿಕಾರಿಗಳು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಸರಗೋಧ ಪೊಲೀಸ್ ಮುಖ್ಯಸ್ಥ ಸಾರಿಕ್ ಖಾನ್ ತಿಳಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಇಜಾಜ್ ಮಾಲ್ಹಿ ತಿಳಿಸಿದ್ದು, ಧರ್ಮನಿಂದೆಯ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು. ಅಧಿಕಾರಿಗಳು ಗುಂಪನ್ನು ಚದುರಿಸಿದರು ಮತ್ತು ಉದ್ವಿಗ್ನತೆಯನ್ನು ಶಮನಗೊಳಿಸಲು ಧಾರ್ಮಿಕ ವಿದ್ವಾಂಸರಿಂದ ಸಹಾಯ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಪಾಕಿಸ್ತಾನದ ಧರ್ಮನಿಂದೆಯ ಕಾನೂನಿನ ಅಡಿಯಲ್ಲಿ, ಇಸ್ಲಾಂ ಧರ್ಮವನ್ನು ಅವಮಾನಿಸಿದ ಯಾರಿಗಾದರೂ ಮರಣದಂಡನೆಯನ್ನು ನೀಡಬಹುದು. ಆದರೆ ಈವರೆಗೆ ಧರ್ಮನಿಂದನೆಗಾಗಿ ಯಾರನ್ನೂ ಗಲ್ಲಿಗೇರಿಸಲಾಗಿಲ್ಲ, ಆರೋಪಗಳು ಗಲಭೆಗಳು ಮತ್ತು ಗುಂಪು ಹಿಂಸಾಚಾರಕ್ಕೆ ಕಾರಣವಾಗಿವೆ.

 

 

Ad
Ad
Nk Channel Final 21 09 2023
Ad