Bengaluru 23°C
Ad

ಷೇರುಪೇಟೆ ಕುರಿತು ಭವಿಷ್ಯ ನುಡಿದ ಪ್ರಧಾನಿ ನರೇಂದ್ರ ಮೋದಿ

Pmmd

ಹೊಸದಿಲ್ಲಿ: “ಜೂನ್‌ 4 ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿಯ ದಾಖಲೆಯ ಗೆಲುವಿಗೆ ಸಾಕ್ಷಿಯಾಗಲಿದ್ದು, ಷೇರುಪೇಟೆ ಸೂಚ್ಯಂಕವೂ ಸಹ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಲಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಬಿಜೆಪಿ ಹಾಗೂ ಮುಂಬಯಿ ಷೇರುಪೇಟೆ ಬಗ್ಗೆ ಭವಿಷ್ಯ ನುಡಿದಿರುವ ಮೋದಿ ಅವರು, “ದಾಖಲೆಯ ಮೂರನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲಿದ್ದು, ಷೇರುಪೇಟೆ ಸೂಚ್ಯಂಕವೂ ದಾಖಲೆಯ ಮಟ್ಟಕ್ಕೆ ಏರಿಕೆ ಕಾಣಲಿದೆ. ಕಳೆದೊಂದು ದಶಕದಲ್ಲಿ ಷೇರುಪೇಟೆಯಲ್ಲಿ ಉಂಟಾದ ಬೆಳವಣಿಗೆಗಳು ನಮ್ಮ ಸರಕಾರದ ಮೇಲೆ ಹೂಡಿಕೆದಾರರು ಇಟ್ಟಿರುವ ನಂಬಿಕೆಯು ಪ್ರತಿಬಿಂಬವಾಗಿದೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ 25 ಸಾವಿರ ಅಂಶಗಳಲ್ಲಿದ್ದ ಷೇರು ಸೂಚ್ಯಂಕ ಇಂದು 75 ಸಾವಿರ ಅಂಶಗಳ ಗಡಿ ದಾಟಿದೆ. ದೇಶದ ಅರ್ಥಿಕತೆ ಮೌಲ್ಯ ಐದು ಟ್ರಿಲಿಯನ್‌ಗೆ ಏರಿಕೆಯಾಗಿದೆ.

ಸರಕಾರದ ಸುಧಾರಣ ಕ್ರಮಗಳ ಬಗ್ಗೆ ಹೂಡಿಕೆದಾರರಿಗೆ ಪೂರ್ಣ ಅರಿವಿದ್ದು, ದೃಢ ಹಾಗೂ ಪಾರದರ್ಶಕ ಹಣಕಾಸು ವ್ಯವಸ್ಥೆ ಜನರಲ್ಲಿ ನಂಬಿಕೆ ಇಮ್ಮಡಿಗೊಳಿಸಿದೆ. ದೇಸಿ ಹೂಡಿಕೆದಾರರನ್ನು ಹೆಚ್ಚು ಸಕ್ರಿಯಗೊಳಿಸಿದೆ. ಇದು 10 ವರ್ಷದ ಉಳಿತಾಯ ಆರ್ಥಿಕೀಕರಣದ ಸೂಚನೆಯಾಗಿದೆ ಎಂದಿದ್ದಾರೆ.

Ad
Ad
Nk Channel Final 21 09 2023
Ad