Bengaluru 27°C
Ad

ಜೂನ್‌ 1ರಿಂದ ಡ್ರೈವಿಂಗ್ ಲೈಸೆನ್ಸ್‌ಗೆ ಹೊಸ ನಿಯಮ! ಏನದು?

ಇದೀಗ ಡ್ರೈವಿಂಗ್ ಲೈಸೆನ್ಸ್‌ ಪಡೆಯಬೇಕು ಎನ್ನುವವರಿಗೆ ಒಂದು ಸಿಹಿ ಸುದ್ಧಿ. ಇನ್ನು ಮುಂದೆ ಆರ್‌ಟಿಒ ಮುಂದೆ ಟೆಸ್ಟ್‌ ಡ್ರೈವ್‌ ಮಾಡಬೇಕಿಲ್ಲ.ಈ ಹೊಸ ನಿಯಮ ಜೂನ್ 1 ರಿಂದ ಜಾರಿಯಾಗಲಿದೆ.

ನವದೆಹಲಿ : ಇದೀಗ ಡ್ರೈವಿಂಗ್ ಲೈಸೆನ್ಸ್‌ ಪಡೆಯಬೇಕು ಎನ್ನುವವರಿಗೆ ಒಂದು ಸಿಹಿ ಸುದ್ಧಿ. ಇನ್ನು ಮುಂದೆ ಆರ್‌ಟಿಒ ಮುಂದೆ ಟೆಸ್ಟ್‌ ಡ್ರೈವ್‌ ಮಾಡಬೇಕಿಲ್ಲ.ಈ ಹೊಸ ನಿಯಮ ಜೂನ್ 1 ರಿಂದ ಜಾರಿಯಾಗಲಿದೆ. ವಾಹನ ಕಲಿತು ಆರ್‌ಟಿಒ ಎದರು ಪರೀಕ್ಷೆ ಪಾಸ್ ಮಾಡಬೇಕಿಲ್ಲ. ಆರ್‌ಟಿಒ ಎದುರು ಡ್ರೈವಿಂಗ್ ಟೆಸ್ಟ್ ಮಾಡದೇ ಲೈಸೆನ್ಸ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಹೊಸ ನಿಯಮದ ಪ್ರಕಾರ,ಡ್ರೈವಿಂಗ್ ಪರೀಕ್ಷೆಯನ್ನು ಖಾಸಗಿ ಸಂಸ್ಥೆಗಳು ಮಾಡಲಿದೆ. ಸರ್ಕಾರದ ಅನುಮತಿ ಮೇರೆಗೆ ಖಾಸಗಿ ಸಂಸ್ಥೆಗಳೇ ಡ್ರೈವಿಂಗ್‌ ಲೈಸೆನ್ಸ್‌ ನೀಡಲಿವೆ.ಜೂನ್ 1, 2024ರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯಲು, ಈ ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ಕಾರು, ದ್ವಿಚಕ್ರ ವಾಹನ ಅಥವಾ ಇತರ ವಾಹನ ಕಲಿತು, ಅದೇ ಸಂಸ್ಥೆಯ ಅಧಿಕಾರಿಗಳ ಮುಂದೆ ಟ್ರೈಯಲ್ ನೀಡಬೇಕು. ನಂತರ . ಖಾಸಗಿ ಸಂಸ್ಥೆಗಳ ಸಿಬ್ಬಿಂಧಿಗಳು ಅಥವಾ ಅಧಿಕಾರಿಗಳು ಡ್ರೈವಿಂಗ್ ಲೈಸೆನ್ಸ್ ಪ್ರಮಾಣಪತ್ರ ನೀಡಲಿದ್ದಾರೆ

ಇದರ ಜೊತೆಗೆ ಟ್ರಾಫಿಕ್ ನಿಯಮ ದಂಡದಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ. ಈ ಪೈಕಿ ಅತೀವೇಗದ ಪ್ರಯಾಣಕ್ಕೆ 1,000 ರೂಪಾಯಿಂದ 2,000 ರೂಪಾಯಿ ಇದೆ. ಆದರೆ ಅಪ್ರಾಪ್ತರು ವಾಹನ ಚಲಾಯಿಸಿದರೆ ಬರೋಬ್ಬರಿ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ಕಾರು ಮಾಲೀಕರ ರಿಜಿಸ್ಟ್ರೇಶನ್ ರದ್ದಾಗಲಿದೆ. ಇತ್ತ ಅಪ್ರಾಪ್ತ 25 ವರ್ಷಗಳ ವರೆಗೆ ಲೈಸೆನ್ಸ್ ಪಡೆಯುವಂತಿಲ್ಲ.

ಲೈಸೆನ್ಸ್, ಅರ್ಜಿ ಸೇರಿದಂತೆ ಶುಲ್ಕ ವಿಧಿಸುವಲ್ಲೂ ಸರ್ಕಾರ ನಿಯಮ ರೂಪಿಸಿದೆ.

ಲರ್ನಿಂಗ್ ಲೈಸೆನ್ಸ್(ಫಾರ್ಮ್ 3) : 150 ರೂಪಾಯಿ
ಲರ್ನಿಂಗ್ ಲೈಸೆನ್ಸ್ ಪರೀಕ್ಷಾ ಶುಲ್ಕಾ ( ಅಥವಾ ಮರಳಿ ಪ್ರಯತ್ನ) : 50 ರೂಪಾಯಿ
ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಶುಲ್ಕ: 300 ರೂಪಾಯಿ
ಡ್ರೈವಿಂಗ್ ಲೈಸೆನ್ಸ್ ನೀಡುವ ಶುಲ್ಕ : 200 ರೂಪಾಯಿ
ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಶುಲ್ಕ:1000 ರೂಪಾಯಿ
ಹೆಚ್ಚುವರಿ ವಾಹನ ಕ್ಲಾಸ್ ಲೈಸೆನ್ಸ್ ಶುಲ್ಕ: 500 ರೂಪಾಯಿ
ಲೈಸೆನ್ಸ್ ನವೀಕರಣ ಶುಲ್ಕ : 200 ರೂಪಾಯಿ
ಅವಧಿ ಬಳಿ ಲೈಸೆನ್ಸ್ ನವೀಕರಣ ಶುಲ್ಕ : 300 ರೂಪಾಯಿ
ಅವಧಿ ಮುಗಿದ ಒಂದು ವರ್ಷದ ಬಳಿಕ ನವೀಕರಣ: 1000 ರೂಪಾಯಿ

Ad
Ad
Nk Channel Final 21 09 2023
Ad