Bengaluru 22°C
Ad

ಬೀದರ್: ಸೌಹಾರ್ದ ಸಹಕಾರಿ ಪಿತಾಮಹ ಸಿದ್ದನಗೌಡ ಜನ್ಮ ದಿನಾಚರಣೆ

ನಗರದ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಕಚೇರಿಯಲ್ಲಿ ಶನಿವಾರ ಸಹಕಾರಿ ಕ್ಷೇತ್ರದ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರ ಜನ್ಮ ದಿನ ಆಚರಿಸಲಾಯಿತು.

ಬೀದರ್: ನಗರದ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಕಚೇರಿಯಲ್ಲಿ ಶನಿವಾರ ಸಹಕಾರಿ ಕ್ಷೇತ್ರದ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರ ಜನ್ಮ ದಿನ ಆಚರಿಸಲಾಯಿತು.

ಭಾರತದಲ್ಲಿ ಸಹಕಾರ ಚಳವಳಿಗ ಕಾನೂನುನಾತ್ಮಕವಾಗಿ ಜಾರಿಗೆ ತಂದವರು ಸಿದ್ದನಗೌಡ ಪಾಟೀಲರು.

ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಹಕಾರ ಪಿತಾಮಹ ಎನಿಸಿಕೊಂಡಿದ್ದಾರೆ. ಅವರು ಸ್ಥಾಪಿಸಿದ ಸಹಕಾರ ಸಂಘವು ಇಡಿ ದೇಶದ ಸಹಕಾರ ಚಳವಳಿಯ ದಿಕ್ಕು ಬದಲಿಸಿತು ಎಂದು ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ ಜ್ಯಾಂತಿಕರ್‌ ತಿಳಿಸಿದರು.

ಸಿದ್ದನಗೌಡ ಅವರು ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಪ್ರಥಮ ಸಹಕಾರ ಸಂಘವನ್ನು ಸ್ಥಾಪಿಸಿ ಇಡೀ ದೇಶದಲ್ಲಿಯ ಮೊದಲ ಸಹಕಾರ ಸಂಘ ಸ್ಥಾಪನೆಗೆ ಕಾರಣಿಭೂತರಾದರು ಎಂದು ಹೇಳಿದರು.

ಒಕ್ಕೂದದ ನಿರ್ದೇಶಕರಾದ ರಾಜಶೇಖರ ನಾಗಮೂರ್ತಿ, ಸಂಜಯ ಕ್ಯಾಸಾ, ಶ್ರೀಕಾಂತ ಸ್ವಾಮಿ ಸೋಲಪೂರ, ನಾಗಶೆಟ್ಟಿ ಪಾಟೀಲ ಸುಂಕನಾಳ, ಮಾಯಾದೇವಿ ಸಿಂಧನಕೇರಾ, ಕಾರ್ಯದರ್ಶಿ ಅಮೃತ ಹೊಸಮನಿ, ಅಭಿವೃದ್ಧಿ ಅಧಿಕಾರಿ ವೀರಶಟ್ಟಿ ಕಾಮಣ್ಣ, ಸಹಕಾರಿಗಳಾದ ರಾಜಕುಮಾರ, ರಾಹುಲ್‌ ಮತ್ತಿತರರು ಹಾಜರಿದ್ದರು.

Ad
Ad
Nk Channel Final 21 09 2023
Ad