Bengaluru 22°C
Ad

ಸಿಟಿ ಆಫ್ ವಿಂಡ್ಸ್‌ ಎಂದೇ ಪ್ರಸಿದ್ಧವಾದ ಸುಂದರ ನಗರ ಬಾಕು

ಕ್ಯಾಸ್ಪಿಯನ್‌ ಸಮುದ್ರದ ಕಿನಾರೆಯಲ್ಲಿರುವ ಅಝರ್ಬೈಜಾನ್‌ ದೇಶದ ರಾಜಧಾನಿ ಬಾಕು. ಸಿಟಿ ಆಫ್ ವಿಂಡ್ಸ್‌ ಎಂದೇ ಪ್ರಸಿದ್ಧವಾದ ಸುಂದರ ನಗರ ಬಾಕು 13ನೇ ಶತಮಾನದಲ್ಲಿ ಓರ್ವ ಯಾತ್ರಿಕನ ಪ್ರವಾಸಿ ಕಥನ ಬರಹದ ಮೂಲಕ ವಿಶ್ವಕ್ಕೆ ಪರಿಚಯವಾದ ನಗರವಾಗಿದೆ.

ಕ್ಯಾಸ್ಪಿಯನ್‌ ಸಮುದ್ರದ ಕಿನಾರೆಯಲ್ಲಿರುವ ಅಝರ್ಬೈಜಾನ್‌ ದೇಶದ ರಾಜಧಾನಿ ಬಾಕು. ಸಿಟಿ ಆಫ್ ವಿಂಡ್ಸ್‌ ಎಂದೇ ಪ್ರಸಿದ್ಧವಾದ ಸುಂದರ ನಗರ ಬಾಕು 13ನೇ ಶತಮಾನದಲ್ಲಿ ಓರ್ವ ಯಾತ್ರಿಕನ ಪ್ರವಾಸಿ ಕಥನ ಬರಹದ ಮೂಲಕ ವಿಶ್ವಕ್ಕೆ ಪರಿಚಯವಾದ ನಗರವಾಗಿದೆ.

ಜಗತ್ತಿನ ಪ್ರಥಮ ಪೆಟ್ರೋಲಿಯಂ ನಿಕ್ಷೇಪವನ್ನು ಗುರುತಿಸಿದ ಸ್ಥಳವಾಗಿದೆ. 1837ಕ್ಕೆ ಪ್ರಥಮ ಬಾರಿಗೆ ಡ್ರಿಲ್ಲಿಂಗ್‌ ಮಾಡಿ ತೈಲವನ್ನು ಹೊರ ತೆಗೆಯಲಾಯಿತು. ಪ್ರಸ್ತುತ ಜಗತ್ತಿಗೆ ಐದು ಪ್ರಮುಖ ತೈಲ ಸರಬರಾಜು ಮಾಡುವ ಸ್ಥಳವಾಗಿದೆ.

ಶ್ರೀಮಂತ ಇತಿಹಾಸ, ಸಂಸ್ಕೃತಿಯು 4ನೇ ಮಿಲಿಯೆನಂ ಬಿ. ಸಿ.ಯಿಂದಲೆ ಇದ್ದು ಶಿರ್ವ ನಶ್ವಸ್‌ ರಾಜಮನೆತನದ ಅರಮನೆ ಹಾಗೂ ಇನ್ನಿತರ ಆಕರ್ಷಕ ವಾಸ್ತು ವೈವಿಧ್ಯಗಳು ವಿಶ್ವದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ.

ಪ್ರವಾಸಿಗರು ಭೇಟಿ ನೀಡಲಿರುವ ಸ್ಥಳಗಳನ್ನು ನೋಡುವುದಾದರೆ, ಶಿರ್ವ ನಶ್ವಸ್‌ ವಂಶದ ಅರಮನೆ, 15ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಪ್ರಾಚಿನ ವಾಸ್ತು ಶಿಲ್ಪದ ಮೇರು ಕೃತಿಯಾಗಿದೆ. ಶ್ರೀಮಂತ ಇತಿಹಾಸ ಸಂಸ್ಕೃತಿಗೆ ಸಾಕ್ಷಿಯಾಗಿದೆ.

ಬಿಲ್ಗಾ ಬೀಚ್‌: ಅಝರ್ಬೈಜಾನ್‌ ಬಾಕು ಬಳಿ ಕ್ಯಾಸ್ಪಿಯನ್‌ ಸಮುದ್ರದ ಸುಂದರ ಕಡಲ ಕಿನಾರೆ, ಚಿನ್ನದ ಮರಳು, ಸ್ಫಟಿಕ ಸ್ಪಷ್ಟ ನೀರು ಪ್ರವಾಸಿಗರ ಮನ ಸೆಳೆಯುವ ಸುಂದರ ಕಡಲ ತೀರವಾಗಿದೆ.

ಫೌಂಟೈನ್‌ ಸ್ಕ್ವೇರ್‌: ಅಝರ್ಬೈಜಾನ್‌, ಬಾಕುವಿನ ಜನಪೀಡಿತ ಪ್ರದೇಶದ ಮದ್ಯಭಾಗದಲ್ಲಿ ಹಚ್ಚ ಹಸುರಿನ ನಡುವೆ ಕಂಗೊಳಿಸುತ್ತಿರುವ ಎತ್ತರದ ನೀರಿನ ಕಾರಂಜಿ ಪ್ರಶಾಂತವಾಗಿ ಜಲಧಾರೆಯನ್ನು ಸುರಿಸುತ್ತಿದೆ.

ಪುಟ್ಟ ವೆನ್ನಿಸ್‌: ಪ್ರಸಿದ್ಧ ಇಟಾಲಿಯನ್‌ ನಗರವನ್ನು ಹೋಲುವಂತೆ ನಿರ್ಮಿಸಲಾಗಿರುವ ಪ್ರವಾಸಿ ತಾಣ. ಕಾಲುವೆ, ದೋಣಿ ವಿಹಾರ, ಆಕರ್ಷಕ ಸೇತುವೆಗಳು, ವರ್ಣರಂಜಿತ ಕಟ್ಟಡ ಇಲ್ಲಿನ ವಿಶೇಷತೆಯಾಗಿದೆ.

ಬಾಕು ಬೊಲಿವಾರ್ಡ್‌: ಕ್ಯಾಸ್ಪಿಯನ್‌ ಸಮುದ್ರದ ಬದಿಯಲ್ಲಿ ನಿರ್ಮಾಣವಾಗಿರುವ ಸುಂದರ ಉದ್ಯಾನವನ, ವಾಸ್ತು ಶಿಲ್ಪಗಳ ಅದ್ಭುತ ವಾಯು ವಿಹಾರ ಸ್ಥಳವಾಗಿದೆ.

ರಾಷ್ಟ್ರೀಯ ಧ್ವಜ ಚೌಕ: ಅಝರ್ಬೈಜಾನ್‌ ಬಾಕುವಿನ ರಾಷ್ಟ್ರೀಯ ಧ್ವಜ ಸ್ತಂಭ 162 ಮೀಟರ್‌ 531 ಅಡಿ ಎತ್ತರದ ಬೃಹತ್‌ ಧ್ವಜ ಸ್ತಂಭ ಹೊಂದಿರುವ ಚೌಕ, ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದೆ.

ಮಣ್ಣಿನ ಜ್ವಾಲಮುಖಿ: ಘೋಬಾಸ್ಥಾನ್‌ ರಾಷ್ಟ್ರೀಯ ಉದ್ಯಾನವನ, ಬಾಕುವಿನಲ್ಲಿರುವ ವಿಶಿಷ್ಟ ಭೂವೈಜ್ಞಾನಿಕ ವಿದ್ಯಾಮಾನಕ್ಕೆ ಸಾಕ್ಷಿ. ಮಣ್ಣಿನ ಜ್ವಾಲಮುಖೀ ಉದ್ಯಾನವನದಲ್ಲಿ 300 ಮಣ್ಣಿನ ಜ್ವಾಲ ಮುಖೀಗಳಿವೆ. ಭೂಗರ್ಭದಿಂದ ಹೊರ ಉಗುಳುವ ಮಣ್ಣಿನ ಲಾವಾರಸ ಆಕರ್ಷಣೆಯ ಕೇಂದ್ರ ಹಾಗೂ ಹೊರ ಹೊಮ್ಮಿದ ಮಣ್ಣು ಚರ್ಮ ರೋಗಕ್ಕೆ ಆರೋಗ್ಯವಾಗಿದೆ.

ಶಿರ್ವನಶ್ವಸ್‌ ಅರಮನೆ: 9ರಿಂದ 16ನೇ ಶತಮಾನದ ವರೆಗೆ ಆಡಳಿತ ನಡೆಸಿರುವ ಶಿರ್ವ ನಶ್ವಸ್‌ ವಂಶದವರ ಅರಮನೆ ಸಂಕೀರ್ಣ, ಮುಖ್ಯ ಅರಮನೆ, ಮಸೀದಿ, ಸ್ನಾನ ಗ್ರಹ, ಸಮಾದಿ, ಎಲ್ಲ ಅರಮನೆಯ ಆವರಣದಲ್ಲಿದೆ.

ಡೆನಿಜ್ಮೆನಾರಿ ಪಾರ್ಕ್‌: ಕ್ಯಾಸ್ಪಿಯನ್‌ ಸಮುದ್ರದ ಕಿನಾರೆಯ ಉದ್ದಕ್ಕೂ ನಿರ್ಮಿಸಲಾಗಿರುವ ಆಕರ್ಷಣೀಯ ಉದ್ಯಾನವನ. ಹಲವು ಆಕರ್ಷಣೀಯ ಪ್ರವಾಸಿ ತಾಣವಾಗಿರುವ ಬಾಕು ಉತ್ತಮ ಮಟ್ಟದ ಸ್ಟಾರ್‌ ಹೊಟೇಲ್‌, ವೈವಿಧ್ಯಮಯ ಉಪಹಾರಗ್ರಹಗಳು ಸಾರಿಗೆ ವ್ಯವಸ್ಥೆ ಇತ್ಯಾದಿ ಪ್ರವಾಸಿಗರಿಗೆ ಉತ್ತಮ ಸೇವೆಯನ್ನು ಒದಗಿಸುವುದರ ಮೂಲಕ ಪ್ರವಾಸೋದ್ಯಮದಲ್ಲಿ ಅತ್ಯಂತ ಹೆಚ್ಚು ಆದಾಯ ಗಳಿಸುತ್ತಿರುವ ನಗರವಾಗಿದೆ.

Ad
Ad
Nk Channel Final 21 09 2023
Ad