Bengaluru 24°C
Ad

ಬಿಭವ್‌ ಕುಮಾರ್‌ ಅರೆಸ್ಟ್‌ ಬಳಿಕ ಅತ್ಯಾಚಾರ, ಕೊಲೆ ಬೆದರಿಕೆ ಬರುತ್ತಿದೆ ಎಂದ ಸ್ವಾತಿ ಮಲಿವಾಲ್‌

ಬಿಭವ್‌ ಕುಮಾರ್‌ ನಿಂದ ಹಲ್ಲೆ ಆರೋಪದ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ

ನವದೆಹಲಿ:  ಬಿಭವ್‌ ಕುಮಾರ್‌ ನಿಂದ ಹಲ್ಲೆ ಆರೋಪದ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಬಿಭವ್‌ ಕುಮಾರ್‌ ಅರೆಸ್ಟ್‌ ಬಳಿಕ ಆಪ್‌ ಕಾರ್ಯಕರ್ತರು ಮತ್ತು ನಾಯಕರಿಂದ ತಮಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬರುತ್ತಿದೆ ಎಂದು ಹೇಳಿದ್ದಾರೆ.

ಬಿಭವ್‌ ಕುಮಾರ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್‌ ಧ್ರುವ್‌ ರತೀ ತಮ್ಮ ವಿರುದ್ಧ ಏಕಪಕ್ಷೀಯವಾದ ವಿಡಿಯೋ ಹರಿಬಿಟ್ಟ ನಂತರ ನನ್ನ ವಿರುದ್ಧ ಆಪ್‌ ಮುಖಂಡರು ಮತ್ತು ಕಾರ್ಯಕರ್ತರು ಮುಗಿ ಬೀಳುತ್ತಿದ್ದಾರೆ.

ನನ್ನ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜೀವ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ ಎಂದು ಸ್ವಾತಿ ಮಲಿವಾಲ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ತಮಗೆ ಬಂದಿರುವ ಬೆದರಿಕೆ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನೂ ಶೇರ್‌ ಮಾಡಿದ್ದಾರೆ.

 

Ad
Ad
Nk Channel Final 21 09 2023
Ad