Bengaluru 26°C
Ad

ಅನಂತ್ ಅಂಬಾನಿ ವಿವಾಹ ಮಹೋತ್ಸವ: ಅತಿಥಿಗಳಿಗೆ ಸಿಲ್ವರ್ ಫಿಲಿಗ್ರೀ ವಸ್ತು ಉಡುಗೊರೆ

ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಅವರ ಜುಲೈನಲ್ಲಿ ನಡೆಯಲಿರುವ ವಿವಾಹ ಮಹೋತ್ಸವದಲ್ಲಿ ಜಾಗತಿಕ ವಿಶೇಷ ಅತಿಥಿಗಳಿಗೆ ಸಿಲ್ವರ್ ಫಿಲಿಗ್ರೀ ವಸ್ತುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ಹೈದರಾಬಾದ್: ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಅವರ ಜುಲೈನಲ್ಲಿ ನಡೆಯಲಿರುವ ವಿವಾಹ ಮಹೋತ್ಸವದಲ್ಲಿ ಜಾಗತಿಕ ವಿಶೇಷ ಅತಿಥಿಗಳಿಗೆ ಸಿಲ್ವರ್ ಫಿಲಿಗ್ರೀ ವಸ್ತುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ತೆಲಂಗಾಣದ ಕರೀಮ್​ನಗರ್ ಜಿಲ್ಲೆಯ ಬೆಳ್ಳಿ ಕುಸುರಿ ಕಲೆಯ ಫಿಲಿಗ್ರಿಗೆ ಆರ್ಡರ್ ಕೊಡಲಾಗಿದೆ. ಕರೀಮ್​ನಗರದ ಸಿಲ್ವರ್ ಫಿಲಿಗ್ರಿ ಕರಕುಶಲ ಕಲ್ಯಾಣ ಸಂಸ್ಥೆಯಾದ ಸಿಫ್ಕಾದಿಂದ ಅಂಬಾನಿ ಮದುವೆಗೆ 400 ಸಂಖ್ಯೆಯ ಫಿಲಿಗ್ರಿಗಳು ಸರಬರಾಜಾಗಲಿದೆ.

ಫಿಲಿಗ್ರಿ ಕಲೆ ಬಳಸಿ ಅಲಂಕರಿಸಲಾದ ಜ್ಯುವೆಲರಿ ಬಾಕ್ಸ್, ಪರ್ಸ್, ಟ್ರೇ, ಹಣ್ಣು ಬಟ್ಟಲು ಮತ್ತಿತರ ವಸ್ತುಗಳಿವು. 400 ಬೇರೆ ಬೇರೆ ಫಿಲಿಗ್ರಿ ಕಲಾಕೃತಿಗಳಿಗೆ ಆರ್ಡರ್ ಸಿಕ್ಕಿರುವ ವಿಚಾರವನ್ನು ಮಾಧ್ಯಮಗಳಿಗೆ ಸಿಫ್ಕಾ ಖಚಿತಪಡಿಸಿದೆ.

ಕರೀಮ್​ನಗರದ ಈ ಫಿಲಿಗ್ರಿ ಕಲೆಗೆ ಜಿಐ ಟ್ಯಾಗ್ ಸಿಕ್ಕಿದೆ. ಮುಂಬೈನಲ್ಲಿರುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ನಲ್ಲಿ ಕೆಲ ವರ್ಷಗಳ ಹಿಂದೆ ಸಿಫ್ಕಾ ಅಧ್ಯಕ್ಷ ಆರೋಜು ಅಶೋಕ್ ಅವರು ಸಿಲ್ವರ್ ಫಿಲಿಗ್ರಿ ಕಲೆಯ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಆಗ ಅವು ನೀತಾ ಅಂಬಾನಿಯ ಗಮನ ಸೆಳೆದಿವೆ. 2023ರ ನವೆಂಬರ್​ನಿಂದ ರಿಲಾಯನ್ಸ್ ರೀಟೇಲ್​ನ ಸ್ವದೇಶ್ ಮಳಿಗೆಗೆ ಸಿಫ್ಕಾದಿಂದ ಫಿಲಿಗ್ರಿ ಕಲಾವಸ್ತುಗಳ ಸರಬರಾಜು ಆಗುತ್ತಾ ಬಂದಿದೆ. ಈ ಕೃತಿಗಳ ಗುಣಮಟ್ಟ ಮತ್ತು ಆಕರ್ಷಣೆಯ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಅತಿಥಿಗಳಿಗೆ ಮದುವೆಯಲ್ಲಿ ಉಡುಗೊರೆಯಾಗಿ ಕೊಡಲು ಅಂಬಾನಿ ಕುಟುಂಬ ನಿರ್ಧರಿಸಿದೆ.

 

 

Ad
Ad
Nk Channel Final 21 09 2023
Ad