Bengaluru 22°C
Ad

ಧ್ವನಿ ಬದಲಿಸುವ ಆ್ಯಪ್‌ ಬಳಸಿ 7 ಮಂದಿ ಮೇಲೆ ರೇಪ್‌ !

ಗುತ್ತಿಗೆದಾರನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಬಂಂಧಿಸಿದಂತೆ ಆರೋಪಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ: ಧ್ವನಿ ಬದಲಿಸುವ ಆ್ಯಪ್‌ ಮೂಲಕ ವ್ಯಕ್ತಿಯೊಬ್ಬ ಮಹಿಳಾ ಕಾಲೇಜು ಉಪ ನ್ಯಾಸಕಿಯಂತೆ ಮಾತನಾಡಿ 7 ಬುಡಕಟ್ಟು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ ಸಿಧಿಯಲ್ಲಿ ಬೆಳಕಿಗೆ ಬಂದಿದೆ.

ಬ್ರಜೇಶ್‌ ಪ್ರಜಾಪತಿ ಎಂಬ ವ್ಯಕ್ತಿ ಜನವರಿಯಿಂದ ಈವರೆಗೆ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಿಧಿ ಎಸ್ಪಿ ರವೀಂದ್ರ ವರ್ಮಾ, ಆರೋಪಿ ಬ್ರಜೇಶ್‌ ಪ್ರಜಾಪತಿ ಯನ್ನು ಬಂಧಿಸಲಾಗಿದೆ. ಧ್ವನಿ ಬದಲಿಸುವ ಆ್ಯಪ್‌ ಮೂಲಕ ಆತ, ಮಹಿಳಾ ಕಾಲೇಜು ಉಪನ್ಯಾಸಕಿಯಂತೆ ಹೆಣ್ಣುಮಕ್ಕಳೊಂದಿಗೆ ಮಾತನಾಡುತ್ತಿದ್ದ. ಅವರಿಗೆ ಸ್ಕಾಲರ್‌ಶಿಪ್‌ ಇಲ್ಲವೇ ಸರಕಾರಿ ಯೋಜನೆಯಿಂದ ಹಣ ಕೊಡಿಸುವುದಾಗಿ ಹೇಳುತ್ತಿದ್ದ.

ಇದನ್ನು ನಂಬಿ ಆ ಹೆಣ್ಣುಮಕ್ಕಳು ಮೋಸ ಹೋಗಿದ್ದಾರೆ. ಬ್ರಜೇಶ್‌ ಕಾರ್ಮಿಕನಾಗಿದ್ದು, ಯೂಟ್ಯೂಬ್‌ ಮೂಲಕ ಆ್ಯಪ್‌ ಬಳಸುವುದನ್ನು ಕಲಿತಿದ್ದ. ಹೆಣ್ಣು ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆಸಿ, ಅತ್ಯಾಚಾರವೆಸಗಿ, ಅವರಲ್ಲಿದ್ದ ಫೋನ್‌ ಕೂಡ ದೋಚುತ್ತಿದ್ದ. ಅನಂತರ ಆ ಮೊಬೈಲ್‌ನಿಂದ ಇತರ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ. ಸಂತ್ರಸ್ತರೆಲ್ಲರೂ ಬುಡಕಟ್ಟು ಜನಾಂಗದವರು, ಆರ್ಥಿಕವಾಗಿ ಹಿಂದುಳಿದವರು ಎಂದು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad