Bengaluru 24°C
Ad

ಭಾರೀ ಮಳೆಗೆ ರಾಜಕಾಲುವೆಗೆ ಉರುಳಿ ಬಿದ್ದ ಆಟೋ : ಚಾಲಕ ಸಾವು

ಭಾರೀ ಮಳೆಗೆ ರಾಜಕಾಲುವೆಗೆ ಆಟೋ ಉರುಳಿದ ಘಟನೆ ಕೊಟ್ಟಾರ ಅಬ್ಬಕ್ಕ ನಗರದಲ್ಲಿ ನಡೆದಿದೆ.ಆಟೋ ಉರುಳಿ ಬಿದ್ದ ಪರಿಣಾಮ ಅಲ್ಲೇ ಸಾವನ್ನಪ್ಪಿದ್ದಾರೆ ಈ .ಚಾಲಕ ದೀಪಕ್ (40) ದುರ್ಮರಣ ಹೊಂದಿದ್ದಾರೆ.

ಮಂಗಳೂರು: ಭಾರೀ ಮಳೆಗೆ ರಾಜಕಾಲುವೆಗೆ ಆಟೋ ಉರುಳಿದ ಘಟನೆ ಕೊಟ್ಟಾರ ಅಬ್ಬಕ್ಕ ನಗರದಲ್ಲಿ ನಡೆದಿದೆ.ಆಟೋ ಉರುಳಿ ಬಿದ್ದ ಪರಿಣಾಮ ಅಲ್ಲೇ ಸಾವನ್ನಪ್ಪಿದ್ದಾರೆ ಈ .ಚಾಲಕ ದೀಪಕ್ (40) ದುರ್ಮರಣ ಹೊಂದಿದ್ದಾರೆ.

ರಾತ್ರಿ ಸುರಿದ ಭಾರೀ ಮಳೆಗೆ ಕೊಟ್ಟಾರದಲ್ಲಿ ರಾಜಕಾಲುವೆ ತುಂಬಿ ಹರಿದಿದೆ. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ರಸ್ತೆಗೆ ನೀರು ಬಂದಿತ್ತು. ರಾತ್ರಿ ವೇಳೆ ಆ ರಸ್ತೆಯಲ್ಲಿ ಸಂಚರಿಸೋ ವೇಳೆ ಆಟೋ ರಾಜಕಾಲುವೆಗೆ ಉರುಳಿ ಬಿದ್ದಿದೆ.

ಮಳೆ ಸುರಿಯುತ್ತಿದ್ದರಿಂದ ನೀರು ರಸ್ತೆ ಹಾಗೂ ರಾಜಕಾಲುವೆಗೆ ಸಮಾನವಾಗಿ ಹರಿಯುತ್ತಿತ್ತು. ಇದು ತಿಳಿಯದೆ ಆಟೋ ರಾಜಕಾಲುವೆಗೆ ಬಿದ್ದಿದೆ. ಇನ್ನು ಘಟನೆಯಿಂದ ಸಾರ್ವಜನಿಕರು ಕೆಂಡಾಮಂಡಲರಾಗಿದ್ದು, ಆಟೋ ಚಾಲಕನ ಸಾವಿಗೆ ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಹೇಳುತ್ತಿದ್ದಾರೆ

Ad
Ad
Nk Channel Final 21 09 2023
Ad