Bengaluru 22°C
Ad

ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಗೆ ಪ್ರಿಕ್ಸ್ ಪ್ರೈಜ್ ಪ್ರಶಸ್ತಿ

ನಿರ್ದೇಶಕಿ ಪಾಯಲ್ ಕಪಾಡಿಯಾ ಕಾನ್ ಫಿಲ್ಮ್ಸ್‌ ಫೆಸ್ಟಿವಲ್‌ 2024ರಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ .

ಬೆಂಗಳೂರು: ನಿರ್ದೇಶಕಿ ಪಾಯಲ್ ಕಪಾಡಿಯಾ ಕಾನ್ ಫಿಲ್ಮ್ಸ್‌ ಫೆಸ್ಟಿವಲ್‌ 2024ರಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ .

77ನೇ ಆವೃತ್ತಿಯ ಕಾನ್ ಫಿಲ್ಮ್ಸ್‌ ಫೆಸ್ಟಿವಲ್‌ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ. ಹಾಲಿವುಡ್ ನಟ ವಿಯೋಲಾ ಡೇವಿಸ್​ರಿಂದ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾಯಲ್, ‘ತಮ್ಮ ಸಿನಿಮಾದ ಮೂವರು ಪ್ರಮುಖ ನಟಿಯರಾದ ಕಣಿ ಕಸ್ತೂರಿ, ದಿವ್ಯಾ ಪ್ರಭಾ ಹಾಗೂ ಕಾವ್ಯಾ ಕದಮ್ ಅವರಿಗೆ ಧನ್ಯವಾದ ತಿಳಿಸಿದರು.

30 ವರ್ಷಗಳಲ್ಲಿ ಯಾವ ಭಾರತೀಯರು ಈ ಸಾಧನೆ ಮಾಡಿರಲಿಲ್ಲ. ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಕಾನ್​ನ ಗ್ರ್ಯಾಂಡ್​ನ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ . ಸಿನಿಮಾ ಕಾನ್​ನಲ್ಲಿ ಪ್ರದರ್ಶನವಾದಾಗ ಬರೋಬ್ಬರಿ ಎಂಟು ನಿಮಿಷಗಳ ಸ್ಟಾಂಡಿಂಗ್ ಓವಿಯೇಷನ್ ಈ ಸಿನಿಮಾಕ್ಕೆ ದೊರೆತಿದೆ. ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ವೈರಲ್‌ ಆಗಿವೆ.

Ad
Ad
Nk Channel Final 21 09 2023
Ad