Bengaluru 28°C
Ad

ಕರ್ನಾಟಕಕ್ಕೆ ಹರಿಯುವ ಕೃಷ್ಣಾ ನದಿ ನೀರನ್ನು ತಡೆಹಿಡಿದ ಶಿಂಧೆ ಸರ್ಕಾರ

Shindhe

ಚಿಕ್ಕೋಡಿ: ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿ ನೀರಿನ ವಿಚಾರವಾಗಿ ಮತ್ತೆ ಮಹಾಕ್ಯಾತೆ ಎತ್ತಿದೆ. ಮಹಾರಾಷ್ಟ್ರ ಸರ್ಕಾರ ಮತ್ತೆ ತನ್ನ ಹಳೇ ಬುದ್ಧಿ ತೋರಿಸಿದೆ. ಕರ್ನಾಟದ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಹರಿದು ಹೋಗುವ ಕೃಷ್ಣಾ ನದಿ ನೀರನ್ನು ತಡೆಹಿಡಿದಿದೆ.

ಕೃಷ್ಣಾ ನದಿ ನೀರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿತ್ತು. ಆದರೀಗ ನೆರೆಯ ರಾಜ್ಯ ರಾಜಾಪುರ ಬ್ಯಾರೇಜ್ ಬಳಿ ನಾಲ್ವರು ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. ಇಬ್ಬರು ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ನೀರಾವರಿ ಇಲಾಖೆಯ ಸಿಬ್ಬಂದಿ ನಿಯೋಜಿಸಿದೆ. ಮಹಾರಾಷ್ಟ್ರ ಸರ್ಕಾರ ನಾಲ್ವರು ಸಿಬ್ಬಂದಿಯ ಎರಡು ಗಸ್ತು ತಂಡವನ್ನು ನೇಮಕ ಮಾಡಿದೆ.

Ad
Ad
Nk Channel Final 21 09 2023
Ad