Bengaluru 22°C
Ad

ಬ್ರಿಟನ್ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ; 78 ಸಂಸದರ ರಾಜೀನಾಮೆ !

Rishii

ಬ್ರಿಟನ್: ಜೂನ್ 4 ರಂದು ಸಾರ್ವತ್ರಿಕ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗುತ್ತಿದ್ದಂತೆ ಪ್ರಧಾನಿ ರಿಷಿ ಸುನಕ್ ಗೆ ಭಾರೀ ಆಘಾತ ಉಂಟಾಗಿದ್ದು, ಸಲಹೆಗಾರರ ಜೊತೆ ಗೌಪ್ಯ ಮಾತುಕತೆ ನಡೆಸುತ್ತಿದ್ದಾರೆ.

ಸಾರ್ವತ್ರಿಕ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಸೋಲಿನ ಭೀತಿಯಲ್ಲಿರುವ 44 ವರ್ಷದ ರಿಷಿ ಸುನಕ್ ಭಾರೀ ಹಿನ್ನಡೆ ಅನುಭವಿಸುತ್ತಿದ್ದು, ಸುಮಾರು 78 ಸಂಸದರು ರಾಜೀನಾಮೆ ನೀಡಲಿದ್ದಾರೆ.

ಪಕ್ಷದಲ್ಲೇ ಭಾರೀ ಹಿನ್ನಡೆಗೆ ಒಳಗಾಗಿರುವ ರಿಷಿ ಸುನಕ್ ಮುಂಬರುವ ಚುನಾವಣೆ ಎದುರಿಸುವ ಕುರಿತು ಕುಟುಂಬ ಹಾಗೂ ಆಪ್ತರ ಜೊತೆ ವೀಕೆಂಡ್ ಗೆ ತೆರಳಿದ್ದು, ಅಲ್ಲಿ ಗೌಪ್ಯವಾಗಿ ಕಾನೂನು ಸಲಹೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಬ್ರಿಟನ್ ಅನ್ನು ರಿಷಿ ಸುನುಕ್ ಸಮರ್ಪಕವಾಗಿ ಮುನ್ನಡೆಸಿಲ್ಲ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ರಿಷಿ ಸುನಕ್ ನೇತೃತ್ವದ ಪಕ್ಷಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂಬ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ 78 ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Ad
Ad
Nk Channel Final 21 09 2023
Ad