Bengaluru 22°C
Ad

ಮೊಟ್ಟೆಯಲ್ಲಿ ಯಾವ್ಯಾವ ಪ್ರೋಟಿನ್ಸ್​ ಅಂಶ ಇದೆ ಗೊತ್ತಾ?

ಮೊಟ್ಟೆ ತುಂಬಾ ಪೌಷ್ಟಿಕತೆಯಿಂದ ಕೂಡಿರುತ್ತದೆ. ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಅನೇಕ ಸೂಪರ್‌ ಫುಡ್‌ಗಳಲ್ಲಿ ಇದು ಪರ್ಯಾಯವಾಗಿದೆ. ನಮ್ಮ ಆರೋಗ್ಯಕ್ಕೆ ಎಲ್ಲ ಆಹಾರಗಳಲ್ಲಿ ಕೆಲವೊಂದನ್ನು ಸೂಪರ್ ಫುಡ್​ ಎಂದು ವರ್ಗೀಕರಿಸಲಾಗಿದೆ. ಈ ಸೂಪರ್​ ಫುಡ್​ನಲ್ಲಿ ಮೊಟ್ಟೆ ಕೂಡ ಒಂದಾಗಿದೆ.

ಮೊಟ್ಟೆ ತುಂಬಾ ಪೌಷ್ಟಿಕತೆಯಿಂದ ಕೂಡಿರುತ್ತದೆ. ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಅನೇಕ ಸೂಪರ್‌ ಫುಡ್‌ಗಳಲ್ಲಿ ಇದು ಪರ್ಯಾಯವಾಗಿದೆ. ನಮ್ಮ ಆರೋಗ್ಯಕ್ಕೆ ಎಲ್ಲ ಆಹಾರಗಳಲ್ಲಿ ಕೆಲವೊಂದನ್ನು ಸೂಪರ್ ಫುಡ್​ ಎಂದು ವರ್ಗೀಕರಿಸಲಾಗಿದೆ. ಈ ಸೂಪರ್​ ಫುಡ್​ನಲ್ಲಿ ಮೊಟ್ಟೆ ಕೂಡ ಒಂದಾಗಿದೆ.

ಇದರಲ್ಲಿನ ಜೀವಸತ್ವಗಳು, ಖನಿಜಗಳು ಆರೋಗ್ಯಕ್ಕೆ ತುಂಬಾ ಬೇಕಾಗಿವೆ. ಅದರಲ್ಲಿ ಗರ್ಭಿಣಿಯರಿಗಂತೂ ಈ ಮೊಟ್ಟೆ ಆರೋಗ್ಯದ ಅಕ್ಷಯ ಪಾತ್ರೆ ಎಂದೇ ಕರೆಯಬಹುದು. ಏಕೆಂದರೆ ಮೊಟ್ಟೆಗಳಲ್ಲಿ ವಿಟಮಿನ್ A, B, B12 ಇದರ ಜೊತೆಗೆ ಕಬ್ಬಿಣ, ಅಯೋಡಿನ್ ಮತ್ತು ರಂಜಕವನ್ನೂ ಒಳಗೊಂಡಿವೆ.

ಮೊಟ್ಟೆಗಳಲ್ಲಿನ ಅತ್ಯಂತ ಉತ್ತಮ ಗುಣಮಟ್ಟದ ಶೇಕಡಾ 60ರಷ್ಟು ಪ್ರೋಟೀನ್‌ ಬಿಳಿಭಾಗದಲ್ಲಿ ಇದ್ರೆ, ಹಳದಿ ಭಾಗದಲ್ಲಿ ಉಳಿದಿರೋದು ಇರುತ್ತೆ. ಹೀಗಾಗಿ ವೈದ್ಯರು, ರೋಗಿಗಳಿಗೆ ಮೊಟ್ಟೆ ತಿನ್ನುವಂತೆ ಸಲಹೆ ನೀಡುತ್ತಿರುತ್ತಾರೆ.

ವಿಟಮಿನ್ ಅಥವಾ ಜೀವಸತ್ವಗಳನ್ನ ನಮ್ಮ ಜೀವದ ಬಿಲ್ಡಿಂಗ್ ಬ್ಲಾಕ್ಸ್ ಎಂದು ಕರೆಯಲಾಗುತ್ತದೆ. ಇಂತಹ ಪ್ರೋಟಿನ್ ಸಿಗಬೇಕೆಂದರೆ ಮೊಟ್ಟೆಗಳನ್ನು ತಿನ್ನಲೇಬೇಕು. ಏಕೆಂದರೆ ನಮ್ಮ ಸ್ನಾಯು ಮತ್ತು ಅಂಗಾಂಶಗಳ ಶಕ್ತಿ ಮತ್ತು ದುರಸ್ತಿಗೆ ಸಹಾಯ ಮಾಡುತ್ತೆ. ಒಂದು ಮೊಟ್ಟೆಯಲ್ಲಿ ಸುಮಾರು 6.3 ಗ್ರಾಂ ಪ್ರೋಟೀನ್ ಇರುತ್ತದೆ.

ಕೇವಲ ಒಂದು ಮೊಟ್ಟಯಿಂದ ನಾವು 100 ಮಿಗ್ರಾಂ ಕೊಲಿನ್ ಪೋಷಕಾಂಶ ಪಡೆಯುತ್ತೇವೆ. ಈ ಕೊಲಿನ್ ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಅರಿವಿನ ಸಾಮರ್ಥ್ಯ ಹೆಚ್ಚಿಸಿ ನರವೈಜ್ಞಾನಿಕ ಕಾಯಿಲೆಗಳನ್ನು ತಡೆಯುತ್ತದೆ. ಹೃದಯರಕ್ತನಾಳದ ಆರೋಗ್ಯ ಮತ್ತು ಕೋಶ ಪೊರೆಯ ರಚನೆಯನ್ನು ಉತ್ತೇಜಿಸುತ್ತದೆ.

ಮೊಟ್ಟೆ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಪಾರ್ಶ್ವವಾಯು ಮತ್ತು ಹೃದಯಾಘಾತವನ್ನ ತಡೆಯುತ್ತದೆ. ಮೊಟ್ಟೆಗಳು LDL ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಿ ಹೃದ್ರೋಗಗಳ ಅಪಾಯ ಕಡಿಮೆ ಮಾಡುತ್ತದೆ.

ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್- ಡಿ ಇರುತ್ತದೆ. ಇದು ಮಕ್ಕಳಿಗೆ ಮತ್ತು ಬಿಸಿಲಿಗೆ ಓಡಾಡದೇ ಕೆಲಸ ಮಾಡುವವರಿಗೆ ಒಳ್ಳೆಯದು. ಆಸ್ಟ್ರೇಲಿಯಾದಲ್ಲಿ ಕಾಲು ಭಾಗದಷ್ಟು ವಯಸ್ಕರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಅವರು ಆರೋಗ್ಯಕ್ಕಾಗಿ ಮೊಟ್ಟೆಗಳನ್ನ ಹೆಚ್ಚಿನ ಮಟ್ಟದಲ್ಲಿ ಬಳಕೆ ಮಾಡುತ್ತಾರೆ.

ಗರ್ಭಾವಸ್ಥೆಯಲ್ಲಿ ಮೊಟ್ಟೆಗಳು ಉತ್ತಮ ಆಹಾರದ ಆಯ್ಕೆಗಳಲ್ಲಿ ಒಂದಾಗಿದೆ. ಏಕೆಂದರೆ ಹೊಟ್ಟೆಯೊಳಗೆ ಮಗುವಿನ ಬೆಳವಣಿಗೆಗೆ ಹಾಗೂ ತಾಯಿಯ ಶಕ್ತಿಗೆ ಹೆಚ್ಚು ಪೌಷ್ಟಿಕಾಂಶ, ಖನಿಜಗಳನ್ನ ಇವು ಪೂರೈಸುತ್ತದೆ.

ಬೇಯಿಸಿರುವ ಮೊಟ್ಟೆ ತಿನ್ನುವುದು ಹೆಚ್ಚು ಉಪಕಾರಿ ಆಗಿದೆ. ಮೊಟ್ಟೆಗಳು 13 ವಿಭಿನ್ನ ಜೀವಸತ್ವಗಳು ಮತ್ತು ಖನಿಜಗಳು, ಒಮೆಗಾ -3 ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತವೆ.

ಇವು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅವಶ್ಯಕ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಅಗತ್ಯವಿರುವ ಶೇಕಡಾ 90 ರಷ್ಟು ಹೆಚ್ಚುವರಿ ಪ್ರೋಟೀನ್​ಗಳ ಅಗತ್ಯವನ್ನು ಕೇವಲ ಮೊಟ್ಟೆ ಮಾತ್ರ ಒದಗಿಸುತ್ತದೆ.

Ad
Ad
Nk Channel Final 21 09 2023
Ad