Bengaluru 23°C
Ad

ಮೊಟೊರೊಲಾದಿಂದ ಮೇ.30 ರಂದು ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ

ಸ್ಮಾರ್ಟ್‌ಫೋನ್ ತಯಾರಕ ಮೊಟೊರೊಲಾ Moto G04S ಹೆಸರಿನಲ್ಲಿ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಲಿದೆ. ಈ ಫೋನ್ ಇದೇ ತಿಂಗಳ 30 ರಂದು ಬಿಡುಗಡೆಯಾಗಲಿದೆ.

ಸ್ಮಾರ್ಟ್‌ಫೋನ್ ತಯಾರಕ ಮೊಟೊರೊಲಾ Moto G04S ಹೆಸರಿನಲ್ಲಿ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಲಿದೆ. ಈ ಫೋನ್ ಇದೇ ತಿಂಗಳ 30 ರಂದು ಬಿಡುಗಡೆಯಾಗಲಿದೆ.

ಮೊಟೊರೊಲಾದಿಂದ ಈಗಾಗಲೇ ಬಿಡುಗಡೆಯಾಗಿರುವ ಎಡ್ಜ್ 50 ಫ್ಯೂಷನ್ ಸ್ಮಾರ್ಟ್‌ಫೋನ್ ನ ಮುಂದುವರಿಕೆಯಾಗಿ ಈ ಫೋನ್ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್‌ HD+ LCD ಪ್ಯಾನೆಲ್ ಹೊಂದಿರಲಿದೆ.

ಇದು ಗೊರಿಲ್ಲಾ ಗ್ಲಾಸ್ 3 ಸ್ಕ್ರೀನ್​ ಪ್ರೊಟೆಕ್ಷನ್ ಒಳಗೊಂಡಿರಲಿದೆ. ಫೋನ್ ಯುನಿಸೊಕ್ T606 ಆಕ್ಟಾ-ಕೋರ್ ಪ್ರೊಸೆಸರ್ ಜೊತೆಗೆ 4GB RAM ಅನ್ನು ಹೊಂದಿದೆ. ಈ ಸ್ಮಾರ್ಟ್​​ ಫೋನ್‌ 4 GB RAM ಹೊಂದಿದ್ದು 8 GB ವರೆಗೆ ಎಕ್ಸ್​ಪಾಂಡ್ ಮಾಡುವ ಆಯ್ಕೆ ನೀಡಲಾಗಿದೆ.

64 GB ಇಂಟರ್ನಲ್ ಮೆಮೊರಿ ನೀಡಲಾಗಿದೆ. Moto G04S ಸ್ಮಾರ್ಟ್‌ಫೋನ್ Dolby Atmos ಆಡಿಯೋ ಹೊಂದಿದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್​​ಫೋನ್ 50 ಮೆಗಾಪಿಕ್ಸೆಲ್​​ಗಳೊಂದಿಗೆ AI ಚಾಲಿತ ಬ್ಯಾಕ್ ಕ್ಯಾಮರಾ ಹೊಂದಿದೆ. ಎಲ್ಇಡಿ ಫ್ಲ್ಯಾಶ್ ಆಯ್ಕೆ ನೀಡಲಾಗಿದೆ. ಈ ಫೋನ್ ನೈಟ್ ವಿಷನ್ ಮತ್ತು ಪೊರ್ಟ್ರೈಟ್ ಮೋಡ್ ಸಪೋರ್ಟ್​ ಹೊಂದಿರಲಿದೆ.

ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ ಒಳಗೊಂಡಿದೆ. ಈ ಸ್ಮಾರ್ಟ್​ಫೋನ್ ದರ 10,700 ರೂ. ಇದೆ.

Ad
Ad
Nk Channel Final 21 09 2023
Ad