Bengaluru 24°C
Ad

ಚಿರಂಜೀವಿ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಆಶಿಕಾ ರಂಗನಾಥ್​

ಕನ್ನಡದಲ್ಲಿ ಜನಪ್ರಿಯತೆ ಪಡೆದ ನಟಿ ಆಶಿಕಾ ರಂಗನಾಥ್ ಗೆ ಟಾಲಿವುಡ್​ನ ಸ್ಟಾರ್​ ಹೀರೋಗಳ ಜೊತೆ ನಟಿಸುವ ಅವಕಾಶ  ಸಿಗುತ್ತಿದೆ.

ಕನ್ನಡದಲ್ಲಿ ಜನಪ್ರಿಯತೆ ಪಡೆದ ನಟಿ ಆಶಿಕಾ ರಂಗನಾಥ್ ಗೆ ಟಾಲಿವುಡ್​ನ ಸ್ಟಾರ್​ ಹೀರೋಗಳ ಜೊತೆ ನಟಿಸುವ ಅವಕಾಶ  ಸಿಗುತ್ತಿದೆ.

ಈಗಾಗಲೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿರುವ ಆಶಿಕಾ ಮೆಗಾ ಸ್ಟಾರ್​ ಚಿರಂಜೀವಿ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ವಿಶ್ವಂಭರ’ ಸಿನಿಮಾದ ಪಾತ್ರವರ್ಗಕ್ಕೆ ಆಶಿಕಾ ರಂಗನಾಥ್​ ಸೇರ್ಪಡೆ ಆಗಿದ್ದಾರೆ.

ಯು.ವಿ. ಕ್ರಿಯೇಷನ್ಸ್​’ ಮೂಲಕ ‘ವಿಶ್ವಂಭರ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾಗೆ ತ್ರಿಷಾ ಕೃಷ್ಣನ್​ ನಾಯಕಿ. ಅವರ ಜೊತೆ ಆಶಿಕಾ ರಂಗನಾಥ್​ ಕೂಡ ಪಾತ್ರವರ್ಗದಲ್ಲಿ ಇರಲಿದ್ದಾರೆ.

‘ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಿಗೆ ಇದೆ. ಆಶಿಕಾ ಆಯ್ಕೆ ಆಗಿರುವ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಎಂಎಂ ಕೀರವಾಣಿ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಮಲ್ಲಿದಿ ವಸಿಷ್ಠ ಅವರು ‘ಬಿಂಬಿಸಾರ’ ಸಿನಿಮಾದ ಯಶಸ್ವಿನ ಬಳಿಕ ‘ವಿಶ್ವಂಭರ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. 2025ರ ಜನವರಿ 10ರಂದು ‘ವಿಶ್ವಂಭರ’ ಸಿನಿಮಾ ಬಿಡುಗಡೆ ಆಗಲಿದೆ.

Ad
Ad
Nk Channel Final 21 09 2023
Ad