Bengaluru 22°C
Ad

ತುಳಸಿಯಲ್ಲಿ ಯಾವ್ಯಾವ ವಿಟಮಿನ್​, ಖನಿಜಗಳು ಇವೆ ಗೊತ್ತಾ?

ಭಾರತದಲ್ಲಿ ತುಳಸಿ ಗಿಡಕ್ಕೆ ಎಲ್ಲ ಗಿಡಗಳಿಗಿಂತ ಪವಿತ್ರವಾದ ಸ್ಥಾನ ನೀಡಲಾಗಿದೆ. ನಮ್ಮ ಪೂರ್ವಜರ ಕಾಲದಿಂದ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.  ತುಳಸಿ ನೋಡಲು ಚಿಕ್ಕದಿದ್ದರು ಮೈತುಂಬಾ ಔಷಧದ ಗುಣಗಳನ್ನ ಹೊಂದಿದೆ.

ಭಾರತದಲ್ಲಿ ತುಳಸಿ ಗಿಡಕ್ಕೆ ಎಲ್ಲ ಗಿಡಗಳಿಗಿಂತ ಪವಿತ್ರವಾದ ಸ್ಥಾನ ನೀಡಲಾಗಿದೆ. ನಮ್ಮ ಪೂರ್ವಜರ ಕಾಲದಿಂದ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.  ತುಳಸಿ ನೋಡಲು ಚಿಕ್ಕದಿದ್ದರು ಮೈತುಂಬಾ ಔಷಧದ ಗುಣಗಳನ್ನ ಹೊಂದಿದೆ.

ತುಳಸಿ ಆರೋಗ್ಯಕ್ಕೂ ಉತ್ತಮವಾದ ಮೂಲಿಕೆ ಆಗಿದೆ ಎಂದು ಹೇಳಬಹುದು. ಎಲೆಗಳು ವಿಟಮಿನ್ A, C, K, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂನಂತ ಖನಿಜಗಳ ಉತ್ತಮ ಮೂಲವಾಗಿದೆ.

ಫೈಬರ್ ಮತ್ತು ಪ್ರೋಟಿನ್ಸ್​ನಿಂದ ಸಮೃದ್ಧವಾಗಿದ್ದು ತುಳಸಿಯನ್ನು ಹಾಗೇ ತಿನ್ನಬಹುದು ಅಥವಾ ಚಹಾದಲ್ಲಿ ಕುದಿಸಿ ಸೇವನೆ ಮಾಡಬಹುದು. ಇದರಿಂದ ನಮಗೆ ಅನೇಕ ಲಾಭಗಳಿವೆ.

ಕಂಪ್ಯೂಟರ್, ಮೊಬೈಲ್​ ಕಾಲದಲ್ಲಿ ಒತ್ತಡ ನಿವಾರಣೆ ತುಸು ಕಷ್ಟಕರ. ಆದರೆ ಬಹಳ ಹಿಂದಿನಿಂದ ತುಳಸಿ ನಮ್ಮ ಒತ್ತಡ ನಿವಾರಣೆ ಮಾಡುವುದರ ಜೊತೆಗೆ ಮನಸನ್ನು ಶಾಂತಗೊಳಿಸುತ್ತದೆ.

ಇದರಲ್ಲಿ ತುಳಸಿಯು ಮೆದುಳಿನಲ್ಲಿ ಡೋಪಮೈನ್ ಹಾಗೂ ಸಿರೊಟೋನಿನ್ ಮಟ್ಟ ಸಮತೋಲನ ಮಾಡುತ್ತದೆ. ತುಳಸಿ ಎಲೆ ತಿನ್ನುವುದರಿಂದ ಮನಸು ಶಾಂತದಿಂದ ಇರುತ್ತೆ. ಇದು ನಿದ್ರಾಹೀನತೆ, ಖಿನ್ನತೆ ಮತ್ತು ಹೆದರಿಕೆ, ಭಯದಂತವುಗಳನ್ನ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಇದರಲ್ಲಿ ಸತು, ವಿಟಮಿನ್ ಸಿ ಇರುವುದರಿಂದ ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿಯಾಗಿ ವರ್ತಿಸುತ್ತದೆ. ಈ ಸಸ್ಯದ ಕೆಲವು ಎಲೆಗಳನ್ನು ಕುದಿಸುವುದರಿಂದ ನಮ್ಮಲ್ಲಿ ತ್ವರಿತ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು.

ತುಳಸಿ ಕರುಳಿನಲ್ಲಿನ ಉರಿಯೂತವನ್ನು ಶಾಂತಗೊಳಿಸುತ್ತದೆ. ಕರುಳಿನಲ್ಲಿನ ಉತ್ತಮ ಬ್ಯಾಕ್ಟೀರಿಯಾದ ಪರವಾಗಿ ಇದು ಇರುತ್ತದೆ.
ತುಳಸಿಯಲ್ಲಿನ ಫೈಟೊಕೆಮಿಕಲ್ಸ್ ಶ್ವಾಸಕೋಶ, ಚರ್ಮ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.  ನೀವು ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದರೆ, ತುಳಸಿ ಸೌಮ್ಯ ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ.

ನಮ್ಮ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಸಿಟಿಕ್ ಆಮ್ಲವು ಕಲ್ಲುಗಳನ್ನು ಒಡೆಯಲು ಸಹಾಯ ಮಾಡಿ ದೇಹದಿಂದ ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ.

 

Ad
Ad
Nk Channel Final 21 09 2023
Ad