Bengaluru 24°C
Ad

ದುಬೈ ವಿಸಿಟ್ ವೀಸಾದಲ್ಲಿ ತೆರಳುವವರಲ್ಲಿ ಇವಿಷ್ಟು ಇರುವುದು ಕಡ್ಡಾಯ

Visa

ದುಬೈ: ದುಬೈ ವಿಸಿಟ್ ವೀಸಾ ಪಡೆದು ಪ್ರಯಾಣಿಸುವವರು ತಮ್ಮೊಂದಿಗೆ 3000 ದಿರ್ಹಂ (ಸುಮಾರು ರೂ. 68,000) ನಗದು, ಮಾನ್ಯ ರಿಟರ್ನ್‌ ಟಿಕೆಟ್‌ ಮತ್ತು ಅಲ್ಲಿನ ತಾವು ಉಳಿದುಕೊಳ್ಳುವ ಸ್ಥಳದ ಪುರಾವೆಯನ್ನು ಅವರು ದುಬೈ ವಿಮಾನವೇರುವ ಮೊದಲು ಒದಗಿಸಬೇಕು ಎಂದು ಅಲ್ಲಿನ ಪ್ರವಾಸೋದ್ಯಮ ಏಜನ್ಸಿಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.

ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಹಾಗೂ ಅದನ್ನು ಪಾಲಿಸದ ಪ್ರಯಾಣಿಕರನ್ನು ಭಾರತೀಯ ವಿಮಾನ ನಿಲ್ದಾಣಗಳಲ್ಲಿಯೇ ತಡೆದು ವಿಮಾನ ಹತ್ತಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿದು ಬಂದಿದೆ.

ಮಾನ್ಯ ವೀಸಾದ ಜೊತೆಗೆ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುವ ಪಾಸ್‌ಪೋರ್ಟ್‌ ಕೂಡ ಪ್ರಯಾಣಿಕರ ಜೊತೆಗಿರಬೇಕು ಎಂಬ ನಿಯಮ ಹಿಂದೆಯೇ ಇದ್ದರೂ ಈಗ ಅವರ ಬಳಿ ಸಾಕಷ್ಟು ನಗದು ಇದೆ ಎಂಬುದನ್ನೂ ಖಾತರಿಪಡಿಸಲಾಗುತ್ತಿದೆ. 3000 ದಿರ್ಹಂ ಮೌಲ್ಯದ ಯಾವುದೇ ಕರೆನ್ಸಿಯ ನಗದು ಅಥವಾ ಕ್ರೆಡಿಟ್‌ ಕಾರ್ಡ್‌ ಇರಬೇಕು, ಜೊತೆಗೆ ಮಾನ್ಯ ವಿಳಾಸದ ಪುರಾವೆ ಇರಬೇಕು. ಅದು ಅವರ ಸಂಬಂಧಿತರ, ಸ್ನೇಹಿತರ ಮನೆ ಅಥವಾ ಹೋಟೆಲ್‌ ಬುಕಿಂಗ್‌ ಇರಬಹುದು ಎಂದು ತಿಳಿದ ಬಂದಿದೆ.

Ad
Ad
Nk Channel Final 21 09 2023
Ad