ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಇಂದಿಗೆ ಮುಗಿಯಲಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ.
ಬೇಜಾರಿನ ವಿಚಾರ ಎಂದರೆ ಆರ್ಸಿಬಿ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಅವರಿಗೆ ಇದು ಕೊನೇ ಸೀಸನ್. ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಬರೋಬ್ಬರಿ 17 ಸೀಸನ್ಗಳ ಬಳಿಕ ಐಪಿಎಲ್ನಿಂದ ನಿವೃತ್ತಿಯಾಗಿದ್ದಾರೆ.
ಇದು ಆರ್ಸಿಬಿ ಟೀಮ್ಗೆ ಬಹಳ ಶಾಕಿಂಗ್ ಆಗಿದ್ದು, ಈ ಮಧ್ಯೆ ಫ್ಯಾನ್ಸ್ಗೆ ದಿನೇಶ್ ಕಾರ್ತಿಕ್ ಗುಡ್ನ್ಯೂಸ್ ಒಂದು ನೀಡಿದ್ದಾರೆ. ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ನಡೆಯಲಿದ್ದು, ಇಲ್ಲಿ ದಿನೇಶ್ ಕಾರ್ತಿಕ್ ದರ್ಶನವಾಗಲಿದೆ.
ಇನ್ನೆರಡು ವಾರದಲ್ಲಿ ಟಿ20 ವಿಶ್ವಕಪ್ ಶುರುವಾಗಲಿದೆ. ಯುಎಸ್, ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿಗೆ ಈಗಾಗಲೇ ಬಲಿಷ್ಠ ಟೀಮ್ ಇಂಡಿಯಾ ವಿಮಾನಕ್ಕೆ ಹತ್ತಿದೆ. ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಪ್ರತಿನಿಧಿಯಾಗಿ ಫುಲ್ ಟೈಮ್ ಕಾಮೆಂಟೇಟರ್ ಆಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ.