Bengaluru 24°C
Ad

ಯಾವ ಪೊಲೀಸ್ ಅಧಿಕಾರಿಗಳಿಗೂ ಈ ರಾಜ್ಯದಲ್ಲಿ ಗೌರವವಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಈ ಸರ್ಕಾರದ ಅಧಿಕಾರಿಗಳಿಗೆ ಯಾರು ಗೌರವ ಕೊಡುವ ವಾತಾವರಣ ಇಲ್ಲ. ಯಾವ ಪೊಲೀಸ್ ಅಧಿಕಾರಿಗಳಿಗೂ ಈ ರಾಜ್ಯದಲ್ಲಿ ಗೌರವವಿಲ್ಲ. ಈ ಸರ್ಕಾರ ಆ ರೀತಿ ಇದೆ ಎಂದು ಆರೋಪ ಮಾಡಿದ್ದಾರೆ.

ಬೆಂಗಳೂರು: ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಈ ಸರ್ಕಾರದ ಅಧಿಕಾರಿಗಳಿಗೆ ಯಾರು ಗೌರವ ಕೊಡುವ ವಾತಾವರಣ ಇಲ್ಲ. ಯಾವ ಪೊಲೀಸ್ ಅಧಿಕಾರಿಗಳಿಗೂ ಈ ರಾಜ್ಯದಲ್ಲಿ ಗೌರವವಿಲ್ಲ. ಈ ಸರ್ಕಾರ ಆ ರೀತಿ ಇದೆ ಎಂದು ಆರೋಪ ಮಾಡಿದ್ದಾರೆ.

ಚನ್ನಗಿರಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳನ್ನು ಆ ರೀತಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.  ರಾಜ್ಯದಲ್ಲಿ ಕಾನೂನು ಸಂಪೂರ್ಣವಾಗಿ ಕುಸಿದಿದೆ.ಪೊಲೀಸ್ ಇಲಾಖೆ ಕಠಿಣವಾಗಿ ತೀರ್ಮಾನ ಮಾಡದೇ ಇರುವ ರೀತಿ ವಾತಾವರಣ ಸೃಷ್ಟಿ ಈ ಸರ್ಕಾರ ಮಾಡಿದೆ ಎಂದರು.

ಇದು ಸರ್ಕಾರದ ಸ್ವಯಂ ಜವಾಬ್ದಾರಿ. ಇದು ಅವರೇ ಮಾಡಿಕೊಂಡಿರುವ ಕೆಲಸ. ಈ ಸರ್ಕಾರದ ಬಗ್ಗೆ ಅಧಿಕಾರಿಗಳಲ್ಲಿ ವಿಶ್ವಾಸ ಇಲ್ಲ. ಜನರಲ್ಲೂ ವಿಶ್ವಾಸ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Ad
Ad
Nk Channel Final 21 09 2023
Ad