Bengaluru 23°C
Ad

ಮದ್ಯ ದರ ಏರಿಕೆ : ಅಬಕಾರಿ ವರಮಾನ ಶೇ.15ರಷ್ಟು ಹೆಚ್ಚಳ

ರಾಜ್ಯದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಮದ್ಯ ದರ ಏರಿಕೆಯ ನಡುವೆ ಅಬಕಾರಿ ವರಮಾನ ಶೇ. 15ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳ ಕಂಡಿದೆ. 2023-24ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ್ಯ ಸರ್ಕಾರದ ಖಜಾನೆ ಸೇರಿದೆ.

ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಮದ್ಯ ದರ ಏರಿಕೆಯ ನಡುವೆ ಅಬಕಾರಿ ವರಮಾನ ಶೇ. 15ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳ ಕಂಡಿದೆ. 2023-24ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ್ಯ ಸರ್ಕಾರದ ಖಜಾನೆ ಸೇರಿದೆ.

ಅಬಕಾರಿ ಇಲಾಖೆಗೆ ವಾರ್ಷಿಕ 34,500 ಕೋಟಿ ರೂಪಾಯಿ ಟಾರ್ಗೆಟ್ ಅನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿತ್ತು. ಕಳೆದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹೆಚ್ಚುವರಿ 128 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.

2023-24ನೇ ಸಾಲಿನಲ್ಲಿ 34,628 ಕೋಟಿ ರೂಪಾಯಿ ಆದಾಯವು ಅಬಕಾರಿ ಇಲಾಖೆಗೆ ಹರಿದುಬಂದಿದೆ. ಕಳೆದ ವರ್ಷ 29,920 ಕೋಟಿ ರೂಪಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಗ್ರಹ ಮಾಡಿದ್ದರು.

ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಮಾರಾಟ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಆಗುತ್ತಿರಲಿಲ್ಲ. ಹೀಗಾಗಿ ಎರಡು ತಿಂಗಳ ಕಾಲ ಬಿಯರ್‌ ಅಭಾವ ಮುಂದುವರಿದಿತ್ತು.

ಏಪ್ರಿಲ್‌, ಮೇ ವೇಳೆ ನಿತ್ಯ 11.50 ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿತ್ತು. ಬೇಸಿಗೆ‌ಗೆ ಮುನ್ನ ನಿತ್ಯ 8 ಲಕ್ಷ ಲೀಟರ್ ಬಿಯರ್ ಸೇಲ್‌ ಆಗುತ್ತಿತ್ತು. ಈ ವರ್ಷದ ಆರಂಭದ ತಿಂಗಳಲ್ಲಿ ಬಿಯರ್ ಮಾರಾಟ ಕುಸಿತ ಕಂಡಿತ್ತು. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ.30 ಮಾರಾಟ ಹೆಚ್ಚಳವಾಗಿತ್ತು. ಅಗತ್ಯ ಇರುವಷ್ಟು ಬಿಯರ್ ಸಂಗ್ರಹ ಇದೆ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿದ್ದವಾದರೂ ಬೇಸಿಗೆ ತೀವ್ರ ಅಭಾವ ಉಂಟಾಗಿತ್ತು.

ಇನ್ನು ಸಾರಿಗೆ ಸಮಸ್ಯೆ, ಚುನಾವಣೆ ಸಮಯದಲ್ಲಿ ಮಳಿಗೆಗಳಲ್ಲಿ ಹೆಚ್ಚುವರಿ ಮದ್ಯ, ಬಿಯರ್‌ ಸಂಗ್ರಹಣೆ ಮೇಲೆ ನಿರ್ಬಂಧ ಹೇರಿರುವುದು ಕೂಡ ಬಿಯರ್‌ ಪೂರೈಕೆ ಕುಸಿಯಲು ಕಾರಣವಾಗಿತ್ತು.

ಮದ್ಯ ಮಾರಾಟದಿಂದ ಈ ವರ್ಷ ರಾಜ್ಯ ಸರ್ಕಾರ 36 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ. ಆರಂಭದಲ್ಲಿಯೇ ಉತ್ತಮ ಮಾರಾಟ ಕಂಡು ಬಂದಿರುವುದರಿಂದ ಆದಾಯ ಹೆಚ್ಚುವ ನಿರೀಕ್ಷೆ ಇದೆ.

Ad
Ad
Nk Channel Final 21 09 2023
Ad