Bengaluru 22°C
Ad

ಸ್ತನ ಹಾಲು ಮಾರಾಟ, ವಾಣಿಜ್ಯೀಕರಣಕ್ಕೆ ಎಫ್​ಸಿಸಿಎಐ ನಿರಾಕರಣೆ

ಆಹಾರ ಸುರಕ್ಷತೆ ಮತ್ತು ಪ್ರಮಾಣ ಕಾಯ್ದೆ 2006ರ ಅಡಿಯಲ್ಲಿ ಮನುಷ್ಯರ ಹಾಲಿನ (ತಾಯಿ ಎದೆ ಹಾಲು) ಮಾರಾಟ ಅಥವಾ ಸಂಸ್ಕರಣೆ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರದ ಎಫ್​ಎಸ್​ಎಸ್​ಎಐ ಹೇಳಿದೆ.

ಆಹಾರ ಸುರಕ್ಷತೆ ಮತ್ತು ಪ್ರಮಾಣ ಕಾಯ್ದೆ 2006ರ ಅಡಿಯಲ್ಲಿ ಮನುಷ್ಯರ ಹಾಲಿನ (ತಾಯಿ ಎದೆ ಹಾಲು) ಮಾರಾಟ ಅಥವಾ ಸಂಸ್ಕರಣೆ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರದ ಎಫ್​ಎಸ್​ಎಸ್​ಎಐ ಹೇಳಿದೆ. ಮಹಿಳೆಯ ಹಾಲು ಮತ್ತು ಅದರಿಂದ ತಯಾರಿಸಲಾಗುವ ಉತ್ಪನ್ನಗಳ ವಾಣಿಜ್ಯೀಕರಣಗೊಳಿಸುವುದು ಇತ್ಯಾದಿ ಸಂಬಂಧಿತ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣ ಪ್ರಾಧಿಕಾರ ಮೇ 24 ಎಂದು ಹೊರಡಿಸಿದ ಪ್ರಕಟಣೆಯಲ್ಲಿ ಸೂಚಿಸಿದೆ.

ಮಾನವ ಹಾಲು ಮತ್ತದರ ಉತ್ಪನ್ನಗಳ ವಾಣಿಜ್ಯೀಕರಣ ಸಂಬಂಧ ಹಲವು ನೊಂದಾಯಿತ ಸಂಸ್ಥೆಗಳು ನೀಡಿರುವ ದೂರನ್ನು ಪರಿಗಣಿಸಿ ಆ ಉತ್ಪನ್ನಗಳ ಅನಧಿಕೃತ ವಾಣಿಜ್ಯೀಕರಣ ವಿರುದ್ಧ ಪ್ರಕಟಣೆ ಹೊರಡಿಸಲಾಗುತ್ತಿದೆ. ಎಫ್​ಸಿಸಿ ಕಾಯ್ದೆ ಅಡಿಯಲ್ಲಿ ಮಾನವ ಹಾಲಿನ ಮಾರಾಟ ಅಥವಾ ಸಂಸ್ಕರಣೆಗೆ ಅನುಮತಿ ಇರುವುದಿಲ್ಲ ಎಂದು ಹೇಳಿದೆ.

Ad
Ad
Nk Channel Final 21 09 2023
Ad