Bengaluru 23°C
Ad

ರಾಜ್ಯದಲ್ಲೂ ಅಗ್ನಿ ದುರಂತ; ಬೀದರ್‌ ನ ಜೆಸ್ಕಾಂ ಕಚೇರಿಯಲ್ಲಿ ಭಾರಿ ಬೆಂಕಿ ಅವಘಡ!

Bidar

ಬೀದರ್‌ : ಗುಜರಾತ್‌, ದೆಹಲಿಯ ಎರಡು ಕಡೆ ಭೀಕರ ಅಗ್ನಿ ಅವಘಡ ದುರಂತದ ಬೆನ್ನಲ್ಲೆ ರಾಜ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೀದರ್‌ ನಗರದ ಜೆಸ್ಕಾಂ ಕಚೇರಿಯಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ. ನಗರದ ಹೃದಯ ಭಾಗದಲ್ಲಿರೋ ಕೆಇಬಿ ಕಚೇರಿ ಇದಾಗಿದೆ.

ಬೀದರ್‌ ನ ಜ್ಯೋತಿ ನಗರದಲ್ಲಿರುವ ಜೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕಚೇರಿಯ ಪೀಟೋಪಕರಣ ಹಾಗೂ ಟಿಸಿಗಳು ಸುಟ್ಟುಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

Ad
Ad
Nk Channel Final 21 09 2023
Ad