Bengaluru 22°C
Ad

ಗೌಪ್ಯ ಮಾಹಿತಿ ನೀಡದಂತೆ ಕರ್ನಾಟಕ ಹೈಕೋರ್ಟ್‌ಗೆ ಸ್ವಿಗ್ಗಿ ಅರ್ಜಿ

ತಮ್ಮ ಗೌಪ್ಯ ಮಾಹಿತಿಯನ್ನು ನ್ಯಾಷನಲ್‌ ರೆಸ್ಟೋರೆಂಟ್‌ ಆಸೋಸಿಯೇಷನ್‌ ಆಫ್‌ ಇಂಡಿಯಾಗೆ (ಎನ್‌ಆರ್‌ಎಐ) ನೀಡದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ನಿರ್ದೇಶನ ನೀಡಬೇಕೆಂದು ಕೋರಿ, ಗ್ರಾಹಕರ ಮನೆ ಬಾಗಿಲಿಗೆ ಆಹಾರ ಪದಾರ್ಥ ತಲುಪಿಸುವ ಸ್ವಿಗ್ಗಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದೆ.

ಬೆಂಗಳೂರು: ತಮ್ಮ ಗೌಪ್ಯ ಮಾಹಿತಿಯನ್ನು ನ್ಯಾಷನಲ್‌ ರೆಸ್ಟೋರೆಂಟ್‌ ಆಸೋಸಿಯೇಷನ್‌ ಆಫ್‌ ಇಂಡಿಯಾಗೆ (ಎನ್‌ಆರ್‌ಎಐ) ನೀಡದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ನಿರ್ದೇಶನ ನೀಡಬೇಕೆಂದು ಕೋರಿ, ಗ್ರಾಹಕರ ಮನೆ ಬಾಗಿಲಿಗೆ ಆಹಾರ ಪದಾರ್ಥ ತಲುಪಿಸುವ ಸ್ವಿಗ್ಗಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್‌. ಕಮಲ್‌ ಅವರಿದ್ದ ರಜಾ ಕಾಲದ ನ್ಯಾಯಪೀಠ, ಸಿಸಿಐ ಕಚೇರಿ ದೆಹಲಿಯಲ್ಲಿರುವುದರಿಂದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ಗೆ ವಿಚಾರಣೆ ನಡೆಸುವುದಕ್ಕೆ ನ್ಯಾಯಾಂಗ ವ್ಯಾಪ್ತಿ ಇದೆಯೇ ಎಂಬ ಪ್ರಶ್ನೆಯಿದೆ ಎಂದು ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಸಜ್ಜನ್‌ ಪೂವಯ್ಯ, ”ಸ್ವಿಗ್ಗಿ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ನೋಂದಾಯಿಸಲಾಗಿದ್ದು, ಕರ್ನಾಟಕ ಹೈಕೋರ್ಟ್‌ ಈ ಸಂಬಂಧ ಅರ್ಜಿ ವಿಚಾರಣೆ ನಡೆಸಬಹುದಾಗಿದೆ,” ಎಂದು ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ, ಮುಂದುವರಿದ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದೆ.

ಸ್ವಿಗ್ಗಿ ಮತ್ತು ಝೊಮಾಟೋ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿವೆ ಎಂಬುದಾಗಿ ಎನ್‌ಆರ್‌ಎಐ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಸ್ವಿಗ್ಗಿ ಗೌಪ್ಯ ಮಾಹಿತಿಯನ್ನು ಸಿಸಿಐ ಮಹಾನಿರ್ದೇಶನಾಲಯ ಬಹಿರಂಗಪಡಿಸಿದೆ. ಈ ರೀತಿಯಲ್ಲಿ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಿರುವುದು ಸ್ಪರ್ಧಾತ್ಮಕ ಕಾಯಿದೆಯ ಉಲ್ಲಂಘನೆಯಾಗಿದೆ ಮತ್ತು ಅರ್ಜಿದಾರ ಸಂಸ್ಥೆಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Ad
Ad
Nk Channel Final 21 09 2023
Ad