Bengaluru 22°C
Ad

ಚನ್ನಗಿರಿ ಲಾಕಪ್ ಡೆತ್ ಪ್ರಕರಣ: ಯಾರದೇ ತಪ್ಪಿದ್ದರು ಮುಲಾಜಿಲ್ಲದೆ ಕ್ರಮ ಎಂದ ಪರಮೇಶ್ವರ್

ಚನ್ನಗಿರಿ ಲಾಕಪ್ ಡೆತ್ ಪ್ರಕರಣದಲ್ಲಿ ಯಾರದೇ ತಪ್ಪಿದ್ದರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು: ಚನ್ನಗಿರಿ ಲಾಕಪ್ ಡೆತ್ ಪ್ರಕರಣದಲ್ಲಿ ಯಾರದೇ ತಪ್ಪಿದ್ದರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದೇವೆ. ಯಾರ ವೈಫಲ್ಯ ಇದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪೊಲೀಸರು ತಿಂಗಳು ವಸೂಲಿ ಮಾಡಿರುವುದು ಕಂಡು ಬಂದರೆ ಸೇವೆಯಿಂದಲೇ ವಜಾ ಮಾಡುತ್ತೇವೆ. ಅಂತಹ ಅಧಿಕಾರಿಗಳು ಅಧಿಕಾರದಲ್ಲಿ ಇರಬಾರದು. ಘಟನೆ ಸಂಬಂಧ ಈಗಾಗಲೇ ಮೂವರು ಪೊಲೀಸ್ ಅಧಿಕಾರಿಗಳ ಅಮಾನತ್ತಾಗಿದೆ.

ಪೊಲೀಸರಿಗೆ ಕಮಿಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಘಟನೆ ಆಗಿದೆ ಎಂಬ ಸ್ಥಳೀಯರ ಆರೋಪದ ವಿಚಾರ ತನಿಖೆ ಮಾಡಿದಾಗ ಗೊತ್ತಾಗಬೇಕು. ತನಿಖೆಯಲ್ಲಿ ಬೆಳಕಿಗೆ ಬಂದರೆ ಅವರನ್ನ ವಜಾ ಮಾಡುವವರೆಗೂ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.

ಪೊಲೀಸ್ ಠಾಣೆ ಮೇಲೆ ದಾಳಿ ವಿಚಾರದಲ್ಲಿ ನಾನು ಶನಿವಾರ ಸಹ ಪ್ರತಿಕ್ರಿಯಿಸಿದ್ದೇನೆ. ಈಗ ಶಾಸಕರೇ ಹೋಗಿ ಪೊಲೀಸ್ ಠಾಣೆ ಒಳಗೆ ಹೋಗಿ ಗಲಾಟೆ ಮಾಡುತ್ತಾರೆ. ಈ ರೀತಿ ಆಗೋದಾದ್ರೆ ಸಮಾಜದಲ್ಲಿ ಶಾಂತಿ ಹೇಗಿರುತ್ತೆ? ಅದಕ್ಕೆ ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು.

ಅವರು ಶಾಸಕರೇ ಆಗಿರಲಿ ಸಂಸದರೇ ಆಗಿರಲಿ. ಯಾರನ್ನೂ ಕೂಡ ಬಿಡೋದಿಲ್ಲ. ಗೂಂಡಾಗಿರಿ ಮಾಡಿ ಬಚಾವ್ ಆಗ್ತೀನಿ ಎಂದರೆ ಸರಿಯಲ್ಲ. ಯಾರೇ ತಪ್ಪು ಮಾಡಿದ್ರೂ ಕ್ರಮ ಆಗುತ್ತೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

 

 

 

 

Ad
Ad
Nk Channel Final 21 09 2023
Ad