Bengaluru 27°C
Ad

ವ್ಯಾಟ್ಸ್ಆ್ಯಪ್ ಗೂ ಎಂಟ್ರಿ ಕೊಟ್ಟ ಆರ್ಟಿಫೀಶಿಯಲ್ ಇಂಟಲಿಜೆನ್ಸ್

Ai

ನವದೆಹಲಿ: ವ್ಯಾಟ್ಸ್ಆ್ಯಪ್ ಈಗಾಲೇ ತನ್ನ ಬಳಕೆದಾರರಿಗೆ ಹಲವು ಅಪ್‌ಡೇಟ್ ಫೀಚರ್ ನೀಡಿದೆ. ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಜಮಾನ. ಎಲ್ಲವನ್ನೂ ಎಐ ನಿಯಂತ್ರಿಸುತ್ತಿದೆ. ಇದೀಗ ಎಐ ಫೀಚರ್ಸ್ ವ್ಯಾಟ್ಸಾಪ್ ಬಳಕೆದಾರರು ಲಭ್ಯವಾಗುತ್ತಿದೆ. ವ್ಯಾಟ್ಸ್ಆ್ಯಪ್ ಇದೀಗ ಬಳಕೆದಾರರಿಗೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪ್ರೊಫೈಲ್ ಫೋಟೋ ಫೀಚರ್ಸ್ ನೀಡುತ್ತಿದೆ. ಈ ಫೀಚರ್ಸ್ ಮೂಲಕ ಬಳಕೆದಾರರು ತಮ್ಮ ವ್ಯಾಟ್ಸ್ಆ್ಯಪ್ ಪ್ರೊಫೈಲ್‌ಗೆ ಎಐ ಜನರೇಟೆಡ್ ಫೋಟೋ ಬಳಸಲು ಸಾಧ್ಯವಾಗಲಿದೆ.

WA ಬೀಟಾ ಇನ್ಫೋ ಪ್ರಕಾರ ವ್ಯಾಟ್ಸಾಪ್ ಇದೀಗ ಹೊಸ ಫೀಚರ್ ಅಪ್‌ಡೇಟ್ ಮಾಡುತ್ತಿದೆ. ನೂತನ ಫೀಚರ್ಸ್‌ನಿಂದ ಬಳಕೆದಾರರ ಕಸ್ಟಮೈಸ್ ಪ್ರೊಫೈಲ್ ಪಿಕ್ ಬಳಸ ಬಹುದು. ಈ ಮೂಲಕ ಬಳಕೆದಾರರು ಅತ್ಯುತ್ತಮ ಪ್ರೊಫೈಲ್ ಪಿಕ್ ಬಳಸಲು ಸಾಧ್ಯವಿದೆ. ಫೀಚರ್ಸ್ ಕೇವಲ ಸುಂದರ ಫೋಟೋ ಜನರೇಟ್ ಹಾಗೂ ಬಳಸುವುದು ಮಾತ್ರವಲ್ಲ, ಬಳಕೆದಾರರ ಖಾಸಗಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಬಳಕೆದಾರರು ಪ್ರೊಫೈಲ್ ಪಿಕ್ಟರನ್ನು ಮತ್ತೊಬ್ಬರು ಹಂಚಿಕೊಳ್ಳುವುದು ತಪ್ಪಲಿದೆ. ಎಐ ಜನರೇಟರ್ ಫೋಟೋ ಆಗಿರುವ ಕಾರಣ ಬಳಕೆದಾರರ ತಮ್ಮ ಅಸಲಿ ಫೋಟೋಗಳು ಮತ್ತೊಬ್ಬರ ಕೈಸೇರುವುದು ತಪ್ಪಲಿದೆ. ಪ್ರೊಫೈಲ್ ಇಮೇಜ್ ಸ್ಕ್ರೀನ್‌ಶಾಟ್ ತೆಗೆಯಲು ಅವಕಾಶ ನಿರಾಕರಿಸಲಾಗಿದೆ. ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವ್ಯಾಟ್ಸಾಪ್ ಎಐ ಫೀಚರ್ಸ್ ಪರಿಚಿಯಿಸುತ್ತಿದೆ.

ಎಐ ಜನರೇಟೆಡ್ ಪ್ರೊಫೈಲ್ ಫೋಟೋ ಫೀಚರ್ಸ್ ಆಯ್ಕೆ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ. ಈಗಾಗಲೇ ಟೆಸ್ಟಿಂಗ್ ಪ್ರಯೋಗಗಳು ಮುಗಿದಿದೆ. ಇನ್ನು ವ್ಯಾಟ್ಸ್ಆ್ಯಪ್ ಡಿಲೀಟ್ ಫಾರ್ ಎವ್ರಿಒನ್ ಮಾಡಲು ಹೋಗಿ ತಪ್ಪಾಗಿ ಡಿಲೀಟ್ ಫಾರ್ ಮಿ ಮಾಡಿದ್ದರೆ, UNDO ಮಾಡಲು ಅವಕಾಶ ನೀಡಲಾಗಿದೆ. ಈ ಮೂಲಕ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದೆ.

Ad
Ad
Nk Channel Final 21 09 2023
Ad