Bengaluru 24°C
Ad

ಚೀಲಗಳಲ್ಲಿ ತುಂಬಿ ಅವಿತಿಟ್ಟಿದ 26 ಕೋಟಿ ಹಣ ಸೀಝ್ : ಮಹಾರಾಷ್ಟ್ರದಲ್ಲಿ ಐಟಿ ಭರ್ಜರಿ ಬೇಟೆ

ನಾಸಿಕ್‌ನಲ್ಲಿ ಐಟಿ ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡಿದೆ. ಮುಂಬೈನ ಪ್ರಖ್ಯಾತ ಜ್ಯುವೆಲ್ಲರಿ ಶಾಪ್ ಒಂದರ ಮೇಲೆ ಧಿಡೀರ್ ದಾಳಿ ನಡೆಸಲಾಗಿದ್ದು, ಕೋಟಿ ಕೋಟಿ ಹಣ ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರ: ನಾಸಿಕ್‌ನಲ್ಲಿ ಐಟಿ ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡಿದೆ. ಮುಂಬೈನ ಪ್ರಖ್ಯಾತ ಜ್ಯುವೆಲ್ಲರಿ ಶಾಪ್ ಒಂದರ ಮೇಲೆ ಧಿಡೀರ್ ದಾಳಿ ನಡೆಸಲಾಗಿದ್ದು, ಕೋಟಿ ಕೋಟಿ ಹಣ ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಸುಮಾರು ಚೀಲಗಳಲ್ಲಿ ಕೋಟ್ಯಂತರ ರೂಪಾಯಿ ಹಣ ತುಂಬಿಟ್ಟಿದ್ದನ್ನು ಕಂಡು ಅರೆಕ್ಷಣ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈ ದಾಳಿಯಲ್ಲಿ ಬರೋಬ್ಬರಿ 26 ಕೋಟಿ ರೂ. (26 crore) ನಗದು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

S (4)

ಮಹಾರಾಷ್ಟ್ರದ ಮುಂಬೈ ಮೂಲದ ಸುರಾನ (Surana) ಎಂಬ ಚಿನ್ನಾಭರಣಗಳ ಮಳಿಗೆಯ ಮೇಲೆ ಈ ದಾಳಿ ನಡೆಸಲಾಗಿದ್ದು, ಅಕ್ರಮ ಹಣ ವರ್ಗಾವಣೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಆಧರಿಸಿ ಐಟಿ ಟೀಂ (IT) ಈ ಕಾರ್ಯಾಚರಣೆ ನಡೆಸಿದೆ.

Ad
Ad
Nk Channel Final 21 09 2023
Ad