Bengaluru 22°C
Ad

ಕಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾದ ಭಾರತದ ಮೊದಲ ತಾರೆ!

ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆದಿದೆ. ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ʻದಿ ಶೇಮ್‌ಲೆಸ್ʼ ಚಿತ್ರಕ್ಕಾಗಿ ಅನಸೂಯಾ ಸೇನ್‌ಗುಪ್ತಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು. ಕಾನ್‌ ಫೆಸ್ಟಿವಲ್‌ನಲ್ಲಿ ಈ ಗೌರವಕ್ಕೆ ಪಾತ್ರರಾದ ಭಾರತೀಯ ಮೊದಲ ತಾರೆ ಇವರು.

ಬೆಂಗಳೂರು: ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆದಿದೆ. ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ʻದಿ ಶೇಮ್‌ಲೆಸ್ʼ ಚಿತ್ರಕ್ಕಾಗಿ ಅನಸೂಯಾ ಸೇನ್‌ಗುಪ್ತಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು. ಕಾನ್‌ ಫೆಸ್ಟಿವಲ್‌ನಲ್ಲಿ ಈ ಗೌರವಕ್ಕೆ ಪಾತ್ರರಾದ ಭಾರತೀಯ ಮೊದಲ ತಾರೆ ಇವರು.

ಶುಕ್ರವಾರ ರಾತ್ರಿ (ಮೇ.24) ನಡೆದ ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅನಸೂಯಾ ಸೇನ್‌ಗುಪ್ತಾ ʻದಿ ಶೇಮ್‌ಲೆಸ್ʼ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು.ಮುಖ್ಯವಾಗಿ ಮುಂಬೈನಲ್ಲಿ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು ಅನುಸೂಯಾ. ಅನಸೂಯಾ ಸೇನ್‌ಗುಪ್ತಾ ಅವರು ಬಲ್ಗೇರಿಯನ್ ನಿರ್ದೇಶಕ ʻಕಾನ್‌ಸ್ಟಾಂಟಿನ್ ಬೊಜಾನೋವ್ʼ ಅವರ ಚಲನಚಿತ್ರ ʻದಿ ಶೇಮ್‌ಲೆಸ್‌ನಲ್ಲಿʼನ ಅವರ ಪಾತ್ರಕ್ಕಾಗಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಚಿತ್ರವನ್ನು ಭಾರತ ಮತ್ತು ನೇಪಾಳದಲ್ಲಿ ಒಂದೂವರೆ ತಿಂಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು ಎಂದು ವರದಿಯಾಗಿದೆ.

ಕಾನ್‌ಸ್ಟಾಂಟಿನ್ ಬೊಜಾನೋವ್ ನಿರ್ದೇಶನದ `ದಿ ಶೇಮ್‌ಲೆಸ್’ ಚಿತ್ರ ರಾಣಿ ಎಂಬ ಭಾರತೀಯ ಲೈಂಗಿಕ ಕಾರ್ಯಕರ್ತೆಯ ಕುರಿತಾದ ಸಿನಿಮಾ. ರಾಣಿ ತೀರ್ಥಯಾತ್ರೆಗೆ ಹೋಗಿರುತ್ತಾಳೆ. ಆ ಬಳಿಕ ಬೆಂಗಳೂರಿನಲ್ಲಿ ಆಕೆ ಕೊಲೆಯಾಗುತ್ತಾಳೆ. ಇದು ಚಿತ್ರದ ತಿರುಳು

 

Ad
Ad
Nk Channel Final 21 09 2023
Ad