Bengaluru 27°C
Ad

ಇಂದು ದೊಡ್ಡಣ್ಣಗುಡ್ಡೆ ಕ್ಷೇತ್ರದಲ್ಲಿ ಶತಬ್ರಹ್ಮಕುಂಭಾಭಿಷೇಕ ಸಹಿತ ಹಲವು ಕಾರ್ಯಕ್ರಮ

Udupi

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಮೇ.23ರ ಗುರುವಾರ ಬೆಳಿಗ್ಗೆ ಶ್ರೀ ಚಕ್ರ ಪೀಠ ಸುರಪೂಜಿತೆಗೆ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ ನೆರವೇರಿದೆ.

ನಂತರ ಕ್ಷೇತ್ರದಲ್ಲಿ ಪಲ್ಲಪೂಜೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ಆರಾಧನಾ ರಂಗ ಪೂಜಾ ಸಹಿತ ಬಲಿ ಉತ್ಸವ ವಸಂತ ಪೂಜೆ ನೆರವೇರಿದೆ.

ಮೇ.24ರ ಇಂದು ಮಹಾ ಚಂಡಿಕಾಯಾಗ, ಮಹಾಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ ನೆರವೇರಲಿದೆ. ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕದಲ್ಲಿ ಭಕ್ತರುಗಳು ತಮ್ಮ ಹೆಸರಿನಲ್ಲಿ ಕಲಶ ಸೇವೆ ಮಾಡಬಹುದು.

ಪಂಚವಂಶತಿ ದ್ರವ್ಯ ಕಲಶ ಅಭಿಷೇಕ ಸೇವೆ ಅನ್ನಸಂತರ್ಪಣೆಯ ಸಹಿತ 5 ಸಾವಿರ ರೂ., ತಾಮ್ರದ ಕಲಶ ಅಭಿಷೇಕಕ್ಕೆ- 1 ಸಾವಿರ ರೂ., ಅನ್ನದಾನಕ್ಕಾಗಿ ಕಾಣಿಕೆಯನ್ನು ಕೂಡ ಕಳುಹಿಸಬಹುದು. ಕ್ಷೇತ್ರದ ಮೊ.ಸಂ.: 9342749650 ಗೂಗಲ್‌ ಪೇ ಮಾಡಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.

Ad
Ad
Nk Channel Final 21 09 2023
Ad