Bengaluru 22°C
Ad

ಡಿವೋರ್ಸ್ ರೂಮರ್ಸ್ ಬೆನ್ನಲ್ಲೇ ದಿಶಾ ಪಠಾನಿ ಬಾಯ್​​ಫ್ರೆಂಡ್​ ಜೊತೆ ನತಾಶಾ ಪ್ರತ್ಯಕ್ಷ

Natas

ಸದ್ಯ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಡಿವೋರ್ಸ್ ಸುದ್ದಿ ಸಿಕ್ಕಾಪಟ್ಟೆ ಹೈಲೈಟ್ ಆಗುತ್ತಿದೆ. ಅವರಿಬ್ಬರು ಬೇರೆಯಾಗುತ್ತಾರೆಂಬ ವದಂತಿ ಬೆನ್ನಲ್ಲಿಯೇ ನಟಿ ನತಾಶಾ ಅವರು ದಿಶಾ ಪಠಾನಿಯ ರೂಮರ್ಡ್ ಬಾಯ್​ಫ್ರೆಂಡ್ ಜೊತೆ ಕಾಣಿಸಿಕೊಂಡು ಈಗ ಸುದ್ದಿಯಾಗಿದ್ದಾರೆ. ಅವರ ಫೊಟೋಗಳು ಕೂಡಾ ವೈರಲ್ ಆಗಿವೆ.

ದಿಶಾ ಪಠಾನಿಯ ರೂಮರ್ಡ್ ಬಾಯ್​​ಫ್ರೆಂಡ್ ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಜೊತೆ ನತಾಶಾ ಸ್ಟಾಂಕೋವಿಕ್ ಕಾಣಿಸಿಕೊಂಡಿದ್ದಾರೆ. ನತಾಶಾ ಫುಲ್ ಸ್ಟೈಲಾಗಿ ಹೊರಗಡೆ ಡೇಟ್ ಎಂಜಾಯ್ ಮಾಡುತ್ತಿರುವುದು ಕಂಡುಬಂತು. ಕ್ರಿಕೆಟರ್ ಪತಿ ಹಾರ್ದಿಕ್ ಪಾಂಡ್ಯ ಅವರ ಜೊತೆ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳ ಮಧ್ಯೆ ನಟಿ ಹೊರಗೆ ಕಾಣಿಸಿಕೊಂಡಿದ್ದಾರೆ.

ಇನ್ನು ಅಲೆಕ್ಸಾಂಡರ್ ನತಾಶಾ ಮತ್ತು ದಿಶಾ ಇಬ್ಬರಿಗೂ ಒಳ್ಳೆಯ ಸ್ನೇಹಿತ ಎಂದು ಹೇಳಲಾಗಿದೆ. ಆದರೂ ಕೆಲವು ನೆಟ್ಟಿಗರು ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಿದ್ದಾರೆ.

ನತಾಶಾ ಮತ್ತು ಹಾರ್ದಿಕ್ ಬೇರ್ಪಟ್ಟರು ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್ ನಂತರ ಅವರ ಪ್ರತ್ಯೇಕತೆಯು ಎಲ್ಲರ ಗಮನ ಸೆಳೆಯಿತು. ವೈರಲ್ ಆಯಿತು. ಇಬ್ಬರೂ ಪರಸ್ಪರ ಫೋಟೋಗಳನ್ನು ಕೂಡಾ ಪೋಸ್ಟ್ ಮಾಡುತ್ತಿಲ್ಲ ಎಂದು ಪೋಸ್ಟ್​ನಲ್ಲಿ ಹೇಳಲಾಗಿದೆ. ಐಪಿಎಲ್ 2024 ಪಂದ್ಯಗಳಲ್ಲಿ ನತಾಶಾ ಅವರು ಇರಲಿಲ್ಲ.

ಇದು ಕೇವಲ ಊಹಾಪೋಹ. ಆದರೆ ಇಬ್ಬರೂ Instagram ಸ್ಟೋರಿಗಳಲ್ಲಿ ಪರಸ್ಪರ ಪೋಸ್ಟ್ ಮಾಡುತ್ತಿಲ್ಲ. ಈ ಹಿಂದೆ ನತಾಶಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಹೆಸರು ಇಟ್ಟಿದ್ದರು. ಆದರೆ ಈಗ ಅವರು ಅವನ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ.

ನತಾಶಾ ಮತ್ತು ಹಾರ್ದಿಕ್ ಅವರ ಪ್ರತ್ಯೇಕತೆಯ ವದಂತಿಗಳು ಎಲ್ಲಾ ಕಡೆ ಈಗ ವೈರಲ್ ಆಗಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ನೀವೇ ಊಹಿಸಬೇಡಿ. ಅವರು ನೀಡುವ ಅಪ್ಡೇಟ್​ ತನಕ ಕಾಯಿರಿ ಎಂದಿದ್ದಾರೆ.

Ad
Ad
Nk Channel Final 21 09 2023
Ad