News Karnataka Kannada
Friday, April 19 2024
Cricket
ಮಂಗಳೂರು

ಕೊಯಿಲಾ ಫಾರಂ: ಪಾಳುಬಿದ್ದ ಭೂಮಿಯಲ್ಲಿ ಖಾಸಗಿ ಉದ್ಯಮಕ್ಕೆ ಅವಕಾಶ ನೀಡಲು ಶಾಸಕ ಮನವಿ

Koila Farm: Private players allowed to do business on degraded land
Photo Credit : News Kannada

ಪುತ್ತೂರು:  ತಾಲ್ಲೂಕಿನ ಕೊಯಿಲಾ ಗ್ರಾಮದ ಪಾಳು ಬಿದ್ದಿರುವ ೬೮೦ ಎಕರೆ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗದಲ್ಲಿ ಪಿ.ಪಿ.ಪಿ. ಆಧಾರದ ಮೇಲೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಆಧಾರದ ಮೇಲೆ ಪೌಲ್ಟ್ರಿಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕಳೆದ ಎರಡು ವಾರದ ಹಿಂದೆ ಪಶುಸಂಗೋಪನಾ ಸಚಿವರಿಗೆ ಶಾಸಕರಾದ ಅಶೋಕ್ ರೈ ಮನವಿ ನೀಡಿದ್ದು ಜು.೩ ರಂದು ಅವರನ್ನು ಎರಡನೇ ಬಾರಿಗೆ ಖುದ್ದಾಗಿ ಭೇಟಿ  ಮಾಡಿ ಚರ್ಚೆ ನಡೆಸಿದ್ದಾರೆ.

ಕೊಯಿಲಾ ಗ್ರಾಮದ ೨೬೦ ಎಕರೆ ಜಾಗವನ್ನು ಈಗಾಗಲೇ ಪಶು ವೈದ್ಯಕೀಯ ಕಾಲೇಜಿಗೆ ಮೀಸಲಿಟ್ಟಿದ್ದು, ಇದೇ ಪರಿಸರದಲ್ಲಿ ಸುಮಾರು ೬೮೦ ಎಕರೆ ಜಾಗವು ಪಶು ಸಂಗೋಪನೆ ಇಲಾಖೆಗೆ ಸೇರಿದ್ದು, ಯಾವುದೇ ಉಪಯೋಗಕ್ಕೆ ಬಾರದೇ ಪಾಳು ಬಿದ್ದಿರುತ್ತದೆ, ಈ ೬೮೦ ಎಕರೆ ಜಾಗದಲ್ಲಿ ಪಿ.ಪಿ.ಪಿ, ಮಾದರಿಯಲ್ಲಿ ಪೌಲ್ಟ್ರಿ ಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅನುಕೂಲವಾಗುವಂತೆ ತಾವುಗಳು ನೋಡಲ್ ಅಧಿಕಾರಿಯನ್ನು ನೇಮಿಸಿ, ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿದಲ್ಲಿ ಗುತ್ತಿಗೆ ಆಧಾರದ ಮೇಲೆ ಪಡೆಯಲು ಹೆಚ್ಚಿನ ಖಾಸಗಿ ಸಂಸ್ಥೆಗಳು ಆಸಕ್ತರಾಗಿರುತ್ತಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಹಾಗೂ ಪಿ.ಪಿ.ಪಿ. ಮಾದರಿಯಿಂದ ಸರ್ಕಾರಕ್ಕೆ ಕಂದಾಯವು ಸಹ ಸಂಗ್ರಹಣೆಯಾಗುತ್ತದೆ. ಅಲ್ಲದೇ ಪಾಳು ಬಿದ್ದಿರುವ ಜಾಗವು ಸಹ ಉಪಯೋಗವಾಗುತ್ತದೆ ಎಂದು ಸಚಿವರಾದ ಕೆ ವೆಂಕಟೇಶ್ ಅವರಲ್ಲಿ ವಿವರಿಸಿದ್ದಾರೆ. ಮಾತುಕತೆ ವೇಳೆ ಶಾಸಕರಿಗೆ ಸಚಿವರು ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ.

ನೂರಾರು ಮಂದಿಗೆ ಉದ್ಯೋಗ
ಕೊಯಿಲಾ ಫಾರಂನಲ್ಲಿ ಪಾಳುಬಿದ್ದಿರುವ ೬೮೦ ಎಕ್ರೆ ಜಾಗದಲ್ಲಿ ಖಾಸಗಿ ಸಂಶ್ಥೆಯವರು ಗುತ್ತಿಗೆ ಆಧಾರದಲ್ಲಿ ಉದ್ಯಮವನ್ನು ಆರಂಭ ಮಾಡಿದ್ದಲ್ಲಿ ನೂರಾರು ಮಂದಿಗೆ ಉದ್ಯೋಗವೂ ದೊರೆಯಲಿದೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಈ ಪ್ರಯತ್ನವನ್ನು ಮಾಡುತ್ತಿದ್ದಾರೆ. ಉದ್ಯಮದಿಂದ ಸರಕಾರಕ್ಕೆ ಆರ್ಥಿಕವಾಗಿ ಲಾಭವಾಗಲಿದ್ದು ಕೊಯಿಲಾ ಗ್ರಾಮವೂ ಇನ್ನೂ ಹೆಚ್ಚಿನ ಅಭಿವೃದ್ದಿ ಕಾಣಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು