News Karnataka Kannada
Friday, April 19 2024
Cricket
ಹಾಸನ

ಬಿಟ್‌ಕಾಯಿನ್‌, ಮೆಡಿಕಲ್‌ ಕಾಲೇಜು ಹಗರಣ ತನಿಖೆ ಮಾಡ್ತೀವಿ: ಸಿಎಂ ಸಿದ್ದರಾಮಯ್ಯ

Gujarat model to put hands in people's pockets and snatch them away: CM
Photo Credit : Facebook

ಹಾಸನ: ಕೆಂಪೇಗೌಡ ಜಯಂತಿಯನ್ನು ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಆಚರಣೆ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹಾಸನದಲ್ಲಿ ಮಾತನಾಡಿದ ಸಿಎಂ, ಈ ವರ್ಷ ರಾಜ್ಯಮಟ್ಟದ ಕೆಂಪೇಗೌಡ ಜಯಂತಿ ನಡೆಯುತ್ತಿದೆ. ಇದು 514 ನೇ ಜಯಂತಿ ಆಗಿದೆ. ಕೆಂಪೇಗೌಡರು 1510 ರಲ್ಲಿ ಜನಿಸಿದರು. ಅವರು ಯಲಹಂಕ ಸಂಸ್ಥಾನದ ಸಾಮಂತ ದೊರೆಯಾಗಿ ಬಹಳ ದೀರ್ಘ ಕಾಲ ಆಡಳಿತ ಮಾಡಿದರು. ವಿಜಯನಗರದ ಅರಸರ ಸಾಮ್ರಾಜ್ಯಕ್ಕೆ ಈ ಸಂಸ್ಥಾನ ಒಳಪಟ್ಟಿತ್ತು ಎಂದರು.

ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದ ನಗರ ಆಗಬೇಕಾದರೆ ಕೆಂಪೇಗೌಡರು ಕಾರಣ. ಬೆಂಗಳೂರು ನಗರದಲ್ಲಿ ಅನೇಕ ಕೆರೆ ಕಟ್ಟೆಗಳನ್ನು  ಕಟ್ಟಿಸಿದರು. ಅಂದೇ ಒಂದೊಂದು ವೃತ್ತಿ ಜನರಿಗೆ ಒಂದೊಂದು ಮಾರುಕಟ್ಟೆ ನಿರ್ಮಿಸಿದ್ದರು. ಕೆಂಪೇಗೌಡರು ದೂರ ದೃಷ್ಟಿಯುಳ್ಳ ನಾಡ ಪ್ರಭು ಆಗಿದ್ದರು. ಅವರ ದೂರ ದೃಷ್ಟಿಯಿಂದಲೇ ಇಂದಿನ ಬೆಂಗಳೂರು ನಿರ್ಮಾಣ ಆಗಿದೆ.

ಅವರು ಚಿಕ್ಕ ವಯಸ್ಸಿನಲ್ಲೇ ವಿಜಯನಗರ ಕ್ಕೆ ಹೋಗಿ ಹಂಪಿ ವೈಭವ ನೋಡಿ ಅದೇ ರೀತಿಯಲ್ಲಿ ನಗರ ನಿರ್ಮಿಸುವ ಕನಸು ಕಂಡಿದ್ದರು. ಅವರು ಜಾತ್ಯಾತೀತ ರಾಜರಾಗಿದ್ದರು. ಅಂತಹ ಒಬ್ಬ ಮಾದರಿ ನಾಡ ಪ್ರಭು ವನ್ನು ಸ್ಮರಿಸಲು ನಾನು ಈ ಹಿಂದೆ ಸಿಎಂ  ಆಗಿದ್ದಾಗ ಕೆಂಪೇಗೌಡ ಜಯಂತಿ ಆಚರಣೆಗೆ ನಿರ್ಧಾರ ಮಾಡಿದ್ದೆವು ಎಂದರು.

ಕೆಂಪೇಗೌಡ ಹೆಸರಿನಲ್ಲಿ ಅಭಿವೃದ್ಧಿ ಪ್ರಾದಿಕಾರ ಮಾಡಿದೆವು. ಅವರ ಹೆಸರು ಚಿರಸ್ಥಾಯಿಗೊಳಿಸಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಟ್ಟೆವು. ಇವೆಲ್ಲಾ ಆಗಿದ್ದು ನಮ್ಮ ಕಾಲದಲ್ಲಿ. ನಾವು ಆಗಲೇ ಕೆಂಪೇಗೌಡ ಪ್ರತಿಮೆ ಮಾಡಲು ತೀರ್ಮಾನ ಮಾಡಿದ್ದೆವು. ನಂತರ ಹಿಂದಿನ ಸರ್ಕಾರ ಅದನ್ನು ನಿರ್ಮಾಣ ಮಾಡಿದೆ.

ಬಿಜೆಪಿ ಅಧಿಕಾರ ಅವಧಿಯಲ್ಲಿ ನಾಲ್ಕು ಮೆಡಿಕಲ್ ಕಾಲೇಜು ಕಟ್ಟಿಸಿದಾರೆ. ಅದರಲ್ಲಿ ಭಾರೀ ಅವ್ಯವಹಾರ ಆಗಿರುವ ಆರೋಪ ಇದೆ. ಶೇಕಡಾ 40 ಕಮಿಷನ್ ಆರೋಪ ಕೂಡ ಬಿಜೆಪಿರವರ ಮೇಲಿದೆ. ಕೊರೊನ ಕಾಲದ ಮೆಡಿಕಲ್ ವಸ್ತುಗಳ ಖರೀದಿ ಅವ್ಯವಹಾರ, ಬಿಟ್ ಕಾಯಿನ್ ಅವ್ಯವಹಾರ ದ ಬಗ್ಗೆ ತನಿಖೆ ಆಗುತ್ತದೆ ಎಂದು ಈ ವೇಳೆ ಹೇಳಿದರು.

ಈಗಾಗಲೇ ಒಂದು ಗ್ಯಾರಂಟಿ ಯೋಜನೆ ಆರಂಭ ಆಗಿದೆ. ಮಹಿಳೆಯರು ಬಸ್ ನಲ್ಲಿ ಓಡಾಡ್ತಾ ಇಲ್ಲವೇ  ಎಂದು ಪ್ರಶ್ನಿಸಿದ ಸಿಎಂ, ಅವರು ಆರೋಪ ಮಾಡುವುದಾದರೆ  ಮಾಡಲಿ ಎಂದರು.

ಜುಲೈ ಒಂದರಿಂದ ಗೃಹ ಜ್ಯೋತಿ ಯೋಜನೆ ಜಾರಿಗೆ ತರಲು ಯೋಜನೆ ತೀರ್ಮಾನ ಮಾಡಿದ್ದೇವೆ. ಅನ್ನ ಭಾಗ್ಯಕ್ಕೆ ಐದು ಕೆಜಿ ಅಕ್ಕಿ ಕೊಡುತ್ತಿದ್ದೇವೆ . ಹಿಂದೆ ನಾವೇ ಏಳು ಕೆಜಿ ಕೊಡ್ತಾ ಅದರ ಪ್ರಮಾಣವನ್ನು ಇಳಿಸಿದರು ಎಂದರು.

ಅಕ್ಕಿ ಹತ್ತು ಕೆಜಿ ಕೊಡಲು 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಅಷ್ಟು ಪ್ರಮಾಣದ ಅಕ್ಕಿ ನಮಗೆ ಸಿಗುತ್ತಿಲ್ಲ. ಮೊದಲು ಎಫ್.ಸಿ.ಐಯವರು ಕೊಡೊದಾಗಿ ಒಪ್ಪಿಕೊಂಡಿದ್ದರು. ನಂತರ ಕೊಡಲು ಆಗಲ್ಲ ಎಂದರು. ಇದು ಕೇಂದ್ರದ ಷಡ್ಯಂತ್ರ. ಕೇಂದ್ರದ ಬಳಿ ಅಕ್ಕಿ ಇದೆ, ಇದ್ದು ಕೊಡಲ್ಲ ಅಂತಿದಾರೆ ಎಂದು ಹೇಳಿದರು.

ಅವರು ಪುಕ್ಕಟೆ ಅಕ್ಕಿ ಕೊಡಲ್ಲ , ಹಣ ಕೊಡುತ್ತೇವೆ ಅಂದರೂ  ಕೊಡುತ್ತಿಲ್ಲ ಎಂದು ಆರೋಪ ಮಾಡಿದ ಸಿಎಂ, ಬಡವರ ಮೇಲೆ ಗದಾಪ್ರಹಾರ ಮಾಡಲು ಹೊರಟಿದ್ದಾರೆ. ಬಿಜೆಪಿ ಎಂದರೆ ಬಡವರ ವಿರೋಧಿ ಪಕ್ಷ ಎಂದು ಕಿಡಿ ಕಾರಿದರು.

ನಾವು ಬೇರೆ ಕಡೆಯಿಂದ ಅಕ್ಕಿ ತರುವ ಪ್ರಯತ್ನ ಮಾಡ್ತಾ ಇದೀವಿ. ನಾಳೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ.  ಅಕ್ಕಿ ತರಲು ಪ್ರಯತ್ನ ಮಾಡಿದ್ರು ಸಿಕ್ಕಿಲ್ಲ. ಅಕ್ಕಿ ಸಿಕ್ಕಿದ ಕೂಡಲೇ ನಾವು ಈ ಯೋಜನೆ ಜಾರಿ ಮಾಡ್ತೇವೆ ಎಂದರು.

ಯಡಿಯೂರಪ್ಪ ಮಾತನಾಡಲಿ. ಅವರ ಅವಧಿಯಲ್ಲಿ ಏನು ಜನಪರ ಯೋಜನೆ ಮಾಡಿದ್ರು ಹೇಳಲಿ ಎಂದರು. ಅವರು ಹೋರಾಟ ಮಾಡೋದು ಬಿಟ್ಟು ಕೇಂದ್ರದಿಂದ ಅಕ್ಕಿ ಕೊಡಿಸಲಿ ಎಂದರು.

ನಮ್ಮ‌ಯೋಜನೆ ಬಗ್ಗೆ ಟೀಕೆ ಮಾಡಲು ಅವರಿಗೆ ಏನು ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದ ಸಿಎಂ, ನಾವು ಯೋಜನೆ ಜಾರಿ ಮಾಡೋ ಮೊದಲು ಬಿಜೆಪಿ ಅವರನ್ನು ಕೇಳ ಬೇಕಿತ್ತಾ ಎಂದು ಆಕ್ರೋಶಿತರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು