Bengaluru 28°C
Ad

ಭಗವದ್ಗೀತೆ ಕಥನ ಜಾಗದಲ್ಲಿ ಮಹಿಳೆಯರ ಹಿಂದೆ ಒಳಉಡುಪಿನಲ್ಲಿ ಕುಳಿತ ಪೊಲೀಸ್​; ವಿಡಿಯೋ ವೈರಲ್‌

Unnao

ಉತ್ತರ ಪ್ರದೇಶ: ಉನ್ನಾವೋದ ದೇವಸ್ಥಾನದ ಮುಂಭಾಗ ಭಗವದ್ಗೀತೆ ಕಥನ ನಡೆಯುತ್ತಿದ್ದ ಜಾಗದಲ್ಲಿ ನೂರಾರು ಮಹಿಳೆಯರ ಹಿಂದೆ ಪೊಲೀಸ್ ಅಧಿಕಾರಿಯೊಬ್ಬರು ​ ಅಂಡರ್​ವೇರ್​ನಲ್ಲಿ ಕುಳಿತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಸ್​ಪಿ ಕ್ರಮ ಕೈಗೊಂಡಿದ್ದಾರೆ. ಅಚಲಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲುಹಗಡ ಗ್ರಾಮದಲ್ಲಿ ಚಂದ್ರಿಕಾ ಮಾತೆಯ ದೇವಾಲಯವಿದೆ ಆ ದೇವಸ್ಥಾನದ ಆವರಣದಲ್ಲಿ ಪೊಲೀಸ್ ಠಾಣೆಯೂ ಇದೆ.

ದೇವಸ್ಥಾನದಲ್ಲಿ ಭಗವದ್ಗೀತೆ ಕಥನ ನಡೆಯುತ್ತಿತ್ತು, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹೊರಠಾಣೆ ಪ್ರಭಾರಿ ರಾಮ್​ನಿವಾಸ್ ಯಾದವ್, ಕೇವಲ ಒಳ ಉಡುಪು ಧರಿಸಿ, ತನ್ನ ಕೋಣೆಯ ಹೊರಗಿನ ವರಾಂಡಾದಲ್ಲಿ ಖುರ್ಚಿಯ ಮೇಲೆ ಕುಳಿತು ತನ್ನ ಮೊಬೈಲ್ ನೋಡುತ್ತಿದ್ದ ದೃಶ್ಯ ಸೆರೆಯಾಗಿತ್ತು.

ಅಲ್ಲಿದ್ದವರೊಬ್ಬರು ತಕ್ಷಣವೇ ಓಡಿಹೋಗಿ ರಾಮ್​ನಿವಾಸ್​ ಬಳಿ ಲುಂಗಿ ಅಥವಾ ಪಂಚೆ ಸುತ್ತಿಕೊಳ್ಳುವಂತೆ ಮನವಿ ಮಾಡಿದರು ಆದರೆ ಯಾರ ಮಾತಿಗೂ ಪೊಲೀಸ್ ಕಿವಿಗೊಡಲಿಲ್ಲ. ಎಸ್ಪಿ ಸಿದ್ಧಾರ್ಥ್ ಶಂಕರ್ ಮೀನಾ ಅವರು ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಹೊರಠಾಣೆ ಪ್ರಭಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಒಗೆ ಸೂಚಿಸಿದರು. ತನಿಖೆ ನಡೆಸುವಂತೆ ಬಿಘಾಪುರ ಸಿಒ ಮಾಯಾ ರೈ ಅವರಿಗೆ ಎಸ್‌ಪಿ ಸೂಚಿಸಿದ್ದಾರೆ.

 

Ad
Ad
Nk Channel Final 21 09 2023
Ad