Bengaluru 22°C
Ad

ಮಿತಿ ಮೀರುತ್ತಿದೆ ಸೈಬರ್ ಕಳ್ಳರ ಹಾವಳಿ : ಅಪ್ಲಿಕೇಶನ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಹಾಕ್ತಾರೆ ಹುಷಾರ್!

ಮಂಗಳೂರಿನಲ್ಲಿ ಮತ್ತೆ ಸೈಬರ್ ಕಳ್ಳರ ಹಾವಳಿ ಮಿತಿ ಮೀರುತ್ತಿದೆ. ಸೈಬರ್‌ ವಂಚನೆಯಿಂದ ಈಗಾಗಲೇ ಹಲವರು ತಮ್ಮ ಹಣ ಕಳೆದುಕೊಂಡಿದ್ದಾರೆ. ಆದರೆ ಓಟಿಪಿ ಆಯ್ತು ಈಗ ಮೊಬೈಲ್ ಅಪ್ಲಿಕೇಶನ್ ಮೂಲಕವೂ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆ ಇದೆ ಹಾಗಾಗಿ ಎಚ್ಚರಿಕೆಯಿಂದ ಇರಬೇಕು.

ಮಂಗಳೂರು: ನಗರದಲ್ಲಿ ಮತ್ತೆ ಸೈಬರ್ ಕಳ್ಳರ ಹಾವಳಿ ಮಿತಿ ಮೀರುತ್ತಿದೆ. ಸೈಬರ್‌ ವಂಚನೆಯಿಂದ ಈಗಾಗಲೇ ಹಲವರು ತಮ್ಮ ಹಣ ಕಳೆದುಕೊಂಡಿದ್ದಾರೆ. ಆದರೆ ಓಟಿಪಿ ಆಯ್ತು ಈಗ ಮೊಬೈಲ್ ಅಪ್ಲಿಕೇಶನ್ ಮೂಲಕವೂ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆ ಇದೆ ಹಾಗಾಗಿ ಎಚ್ಚರಿಕೆಯಿಂದ ಇರಬೇಕು.

Ad

ನಿಮ್ಮ ಮೋಬೈಲ್‌ಗೆ ಇಂದು ಅಪ್ಲಿಕೇಶನ್‌ನ್ನು ಕಳಿಸಿ ಡೌನ್ಲೋಡ್ ಮಾಡಲು ಹೇಳುತ್ತಾರೆ. ನೀವೇನಾದರು ಈ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ರೆ ನಿಮ್ಮ ಹಣ ವಂಚಕರ ಪಾಲಾಗೋದು ಖಂಡಿತ. ಈ ದುಷ್ಕರ್ಮಿಗಳು Remote Access Tools ಬಳಸಿಕೊಂಡು APK ಓ ಫೈಲ್‌/ಆ್ಯಂಡ್ರಾಯ್ಡ ಆ್ಯಪ್‌ ಸಿದ್ಧಪಡಿಸುತ್ತಾರೆ.ಬಳಿಕ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಈ ಆ್ಯಪ್‌ ಕಳುಹಿಸಿ ವಂಚಿಸುತ್ತಾರೆ.

Ad

ಈ ಲಿಂಕ್ ತೆರೆದರೆ ಮೊಬೈಲ್‌ಗೆ ಬರುವ ಎಲ್ಲ ಟೆಕ್ಸ್ಟ್ ಮೆಸೇಜ್‌ಗಳು ವಂಚಕರ ಮೊಬೈಲ್‌ ಗಳಿಗೆ ಫಾರ್ವರ್ಡ್ ಆಗುತ್ತೆ, ಬಳಿಕ ಅವರಿಗೆ ಸುಲಭವಾಗಿ ಓಟಿಪಿ ಪಡೆದು ಬ್ಯಾಂಕ್ ಖಾತೆಗಳಲ್ಲಿರುವ ಹಣ ಎಗರಿಸುತ್ತಾರೆ. ಹಾಗಾಗಿ ಈ ವಂಚನೆ ಬಗ್ಗೆ ಎಚ್ಚರ ವಹಿಸಲು ಸೂಚನೆಯನ್ನು ನೀಡಲಾಗಿದೆ. ಇಂತಹ ಸಂದೇಶ ಬಂದರೆ ಬ್ಯಾಂಕ್ ನವರಿಗೆ ತಕ್ಷಣ ಮಾಹಿತಿ ರವಾನಿಸುವುದು ಒಳಿತು.

Ad

ನಗರದಲ್ಲಿ ಕೇವಲ ಎರಡೂವರೇ ವರ್ಷಗಳಲ್ಲಿ 285 ಸೈಬರ್ ಅಪರಾಧ ಪ್ರಕರಣ ದಾಖಲಾಗಿದ್ದು, ಈ ಹಿನ್ನಲೆ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸೈಬರ್ ಪ್ರಕರಣ ದಾಖಲಿಸಲು ಅವಕಾಶ

Ad
Ad
Ad
Nk Channel Final 21 09 2023