Bengaluru 22°C
Ad

ಸ್ಯಾಮ್‌ಸ್ಯಾಂಗ್‌ : ವಿದ್ಯಾರ್ಥಿಗಳಿಗೆ ರೂ.25 ಲಕ್ಷ ಗೆಲ್ಲುವ ಅವಕಾಶ! ಕೌಶಲ್ಯ ಕಾರ್ಯಗಾರ

ದೇಶದ ಪ್ರಮುಖ ಎಲೆಕ್ಟ್ರಾನಿಕ್‌ ಬ್ರ್ಯಾಂಡ್‌ ಆಗಿರುವ ಸ್ಯಾಮ್‌ಸ್ಯಾಂಗ್‌ ದೇಶದಾದ್ಯಂತ 2000 ಶಾಲಾ ವಿದ್ಯಾರ್ಥಿಗಳಿಗಾಗಿ ʻಡಿಸೈನ್‌ ಥಿಂಕಿಂಗ್‌ ಸ್ಫರ್ಧೆ ಹಾಗೂ ತರಬೇತಿ ʼ ಕಾರ್ಯಾಗಾರವನ್ನು ಆಯೋಜಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.

ಬೆಂಗಳೂರು : ದೇಶದ ಪ್ರಮುಖ ಎಲೆಕ್ಟ್ರಾನಿಕ್‌ ಬ್ರ್ಯಾಂಡ್‌ ಆಗಿರುವ ಸ್ಯಾಮ್‌ಸ್ಯಾಂಗ್‌ ದೇಶದಾದ್ಯಂತ 2000 ಶಾಲಾ ವಿದ್ಯಾರ್ಥಿಗಳಿಗಾಗಿ ʻಡಿಸೈನ್‌ ಥಿಂಕಿಂಗ್‌ ಸ್ಫರ್ಧೆ ಹಾಗೂ ತರಬೇತಿ ʼ ಕಾರ್ಯಾಗಾರವನ್ನು ಆಯೋಜಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.

Ad

ಭಾರತಕ್ಕಾಗಿಯೇ ರೂಪಿಸಿರುವ ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ʻಡಿಸೈನ್‌ ಥಿಂಕಿಂಗ್‌ʼ ( ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು) ಪರಿಕಲ್ಪನೆಯನ್ನು ತಿಳಿದುಕೊಂಡು, ವಾಸ್ತವಿಕ ಜಗತ್ತಿನ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ಬಗೆಗೆ ಅವರನ್ನು ತಯಾರುಗೊಳಿಸಲಾಗುತ್ತದೆ. ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಪರಿಕರಗಳನ್ನು ಹಾಗೂ ಪ್ರಕ್ರಿಯೆಗಳನ್ನು ತಿಳಿದುಕೊಂಡು ಮತ್ತು ಅದರ ಅಧಾರದಲ್ಲಿ ಬಳಕೆದಾರರ ಬೇಡಿಕೆಗಳಿಗೆ ತಕ್ಕಂತೆ ಕಂಡು ಹುಡುಕುವ ವಿಧಾನವಿದು.

Ad

ಇದರಲ್ಲಿ ಯಾರೆಲ್ಲ ಭಾಗವಹಿಸಬಹುದು?
14 ರಿಂದ 17 ವಯಸ್ಸಿನೊಳಗಿನ ಒಬ್ಬರು ಅಥವಾ ಗರಿಷ್ಠ ಐದು ಮಂದಿಯ ತಂಡಗಳಾಗಿ ʻಸಮುದಾಯ ಮತ್ತು ಒಳಗೊಳ್ಳುವಿಕೆʼ ಥೀಮ್‌ ಅಡಿಯಲ್ಲಿ, ಸೌಲಭ್ಯವಂಚಿತರಿಗೆ ಆರೋಗ್ಯ ಸೇವೆಗಳ ಲಭ್ಯತೆ ಸುಲಭವಾಗಿಸುವ, ಕಲಿಕಾ ವಿಧಾನಗಳ ಸುಧಾರಣೆ, ಶಿಕ್ಷಣ ಲಭ್ಯತೆ ಮತ್ತು ಎಲ್ಲರಿಗೂ ಸಾಮಾಜಿಕ ಒಳಗೊಳ್ಳುವಿಕೆಯ ಸಾಧ್ಯತೆಯ ಕುರಿತಾಗಿ ತಮ್ಮ ಆಲೋಚನೆಗಳನ್ನು ಸಲ್ಲಿಸಬಹುದಾಗಿದೆ.

Ad

ಬಹುಮಾನ ಏನಿರುತ್ತದೆ?
ಈ ಸ್ಪರ್ಧೆಯ ಸೆಮಿಫೈನಲ್‌ ತಲುಪುವ 10 ತಂಡಗಳಿಗೆ ಪ್ರೋಟೊಟೈಪ್‌ ಅಭಿವೃದ್ಧಿಗಾಗಿ ತಲಾ ರೂ. 20,000 ಅನುದಾನ ಹಾಗೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ಗಳನ್ನು ನೀಡಲಾಗುತ್ತದೆ. ಅಂತಿಮ ಸುತ್ತಿಗೆ ಪ್ರವೇಶಿಸುವ ಐದು ತಂಡಗಳಿಗೆ ತಲಾ ಪ್ರೋಟೊಟೈಪ್‌ ಅಭಿವೃದ್ಧಿಗಾಗಿ ರೂ.1 ಲಕ್ಷ ಅನುದಾನ ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ಗಳನ್ನು ಒದಗಿಸಲಾಗುತ್ತದೆ.

Ad

ವಿಜೇತರಿಗೆ ಏನು ಸಿಗುತ್ತದೆ?
ವಿಜೇತ ವ್ಯಕ್ತಿ ಅಥವಾ ತಂಡವನ್ನುಸ್ಟಾಲ್‌ ಫಾರ್‌ ಟುಮಾರೋ 2024 ಯೋಜನೆಯ ʻಸಮುದಾಯ ಚಾಂಪಿಯನ್‌ʼ ಎಂದು ಘೋಷಿಸಲಾಗುತ್ತದೆ ಮತ್ತು ಪ್ರೋಟೊಟೈಪ್‌ ಸುಧಾರಣೆಗಾಗಿ ರೂ. 25 ಲಕ್ಷ ಅನುದಾನ ದೊರೆಯುತ್ತದೆ. ಸಮಸ್ಯೆ ಪರಿಹಾರದ ಮನಸ್ಥಿತಿಯನ್ನು ಪ್ರೋತ್ಸಾಹಿಸುವ ಶೈಕ್ಷಣಿಕ ವಿಚಾರಗಳನ್ನು ಉತ್ತೇಜಿಸಲು ವಿಜೇತ ತಂಡದ ಶಾಲೆಗಳಿಗೂ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ನೀಡಲಾಗುತ್ತದೆ.

Ad

 

Ad
Ad
Nk Channel Final 21 09 2023