Bengaluru 25°C
Ad

ಪ್ರಜ್ವಲ್ ರೇವಣ್ಣ ಅರೆಸ್ಟ್ ಅಂತೂ ಆಗುತ್ತಾರೆ: ಸಚಿವ ಡಾ.ಜಿ.ಪರಮೇಶ್ವರ್

ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಆಗಿದೆ. ಬ್ಲೂ ಕಾರ್ನರ್ ನೋಟಿಸ್, ವಾರಂಟ್ ಜಾರಿ ಹಿನ್ನೆಲೆ ಅರೆಸ್ಟ್ ಮಾಡಬೇಕು. ಹಾಗಾಗಿ ಅರೆಸ್ಟ್ ಅಂತೂ ಆಗುತ್ತಾರೆ ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ತುಮಕೂರು: ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಆಗಿದೆ. ಬ್ಲೂ ಕಾರ್ನರ್ ನೋಟಿಸ್, ವಾರಂಟ್ ಜಾರಿ ಹಿನ್ನೆಲೆ ಅರೆಸ್ಟ್ ಮಾಡಬೇಕು. ಹಾಗಾಗಿ ಅರೆಸ್ಟ್ ಅಂತೂ ಆಗುತ್ತಾರೆ ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದೇಶಕ್ಕೆ ಹೋಗುವ ವಿಚಾರದಲ್ಲಿ ತಪ್ಪಿಲ್ಲ ಅಂತಾ ಹೇಳಿರಬಹುದು. ಪ್ರಜ್ವಲ್​ ಹೇಳಿದಂತೆ ಅಲ್ಲಿತನಕ ಯಾವುದೇ ಕಂಪ್ಲೆಂಟ್ ಆಗಿರಲಿಲ್ಲ. ಪ್ರಜ್ವಲ್ ರೇವಣ್ಣ ಏನು ಹೇಳಿಕೆ ಕೊಡ್ತಾರೋ ಕೊಡಲಿ. SITಯವರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳುತ್ತಾರೆ. ಒಂದು ದೇಶದಿಂದ ಒಬ್ಬರನ್ನ ಕರೆದುಕೊಂಡು ಬರೋದು ಸುಲಭವಲ್ಲ ಎಂದಿದ್ದಾರೆ.

ಪ್ರಧಾನಿಗೆ ಸಿಎಂ 2 ಸಲ ಪತ್ರ ಬರೆದಿದ್ದರು, ಸಿಬಿಐಗೆ ಮನವಿ ಮಾಡಿದ್ದೆವು. ಇಂಟರ್‌ಪೋಲ್‌ಗೂ ಮನವಿ ಮಾಡಿದ್ದು, ಬ್ಲೂಕಾರ್ನರ್‌ ನೋಟಿಸ್ ಸಹ ನೀಡಿದ್ದರು. ಪಾಸ್‌ಪೋರ್ಟ್‌ ರದ್ದು ಮಾಡಿ ಅಂತಾ ಕೇಂದ್ರಕ್ಕೂ ಮನವಿ ಮಾಡಿದ್ದೆವು. ಪಾಸ್‌ಪೋರ್ಟ್‌ ರದ್ದು ಪ್ರಕ್ರಿಯೆ ಆರಂಭಿಸಿದ್ದೇವೆ ಅಂತಾ ಕೇಂದ್ರ ಹೇಳಿತ್ತು. ಈ ಮಧ್ಯೆ ಪ್ರಜ್ವಲ್ ಬರುತ್ತೇವೆ ಅಂತಾ ಹೇಳಿದ್ದನ್ನು ಸ್ವಾಗತ ಮಾಡುತ್ತೇನೆ. ತಮ್ಮ ಬಳಿಯಿರುವ ಸಾಕ್ಷ್ಯ, ಮಾಹಿತಿ ಆಧರಿಸಿ SIT ತನಿಖೆ ಮುಂದುವರಿಸುತ್ತೆ ಎಂದರು.

ಪ್ರಜ್ವಲ್ ರೇವಣ್ಣ ನನ್ನದೇನು ತಪ್ಪಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಎಲ್ಲರು ಹಂಗೆ ಹೇಳ್ತಾರೆ, ನಮ್ಮದು ತಪ್ಪಿಲ್ಲ ಅಂತ. ತಪ್ಪಿಲ್ಲ ಅಂದರೆ ಮಾಡಿದೋರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತೆ. ಎಸ್​ಐಟಿ ಅವರು ಎಲ್ಲಾ ಮಾಹಿತಿ ಕಲೆಹಾಕಿ ಅದರ ಆಧಾರದ ಮೇಲೆ ಯಾರದ್ದು ತಪ್ಪು, ಯಾರದ್ದು ತಪ್ಪಿಲ್ಲ ಅಂತ ಹೇಳ್ತಾರೆ. ಒಂದು ವೇಳೆ 31 ಕ್ಕೂ ಬಂದಿಲ್ಲ ಅಂದರೆ ಮುಂದೆ ಏನಾಗುತ್ತೆ ನೋಡೋಣ. ಇನ್ನು ಮೂರು ನಾಲ್ಕು ದಿನ ಇರೋದು ಅಷ್ಟೇ ಎಂದು ಹೇಳಿದ್ದಾರೆ.

Ad
Ad
Nk Channel Final 21 09 2023
Ad