Bengaluru 24°C
Ad

ಗುತ್ತು ನಾಗಬನದಲ್ಲಿ ಮೊಗೇರ ಸಮುದಾಯದವರಿಂದ ವಿಶೇಷ ನಾಗರಾಧನೆ

ಕಾಪು ತಾಲೂಕಿನ ಕುತ್ಯಾರು ಸಮೀಪದ ಮೂಲೊಟ್ಟು ಗುತ್ತು ನಾಗಬನದಲ್ಲಿ ವರ್ಷಕ್ಕೊಮ್ಮೆ ತುಳುವಿನ ಬೇಷ ತಿಂಗಳಲ್ಲಿ ನಡೆಯುವ ಪರಿಶಿಷ್ಟವರ್ಗದ ನಾಗರಾಧನೆ ಪೂಜೆಯು ವಿಶಿಷ್ಟ ರೀತಿಯಲ್ಲಿ ನಡೆಯಿತು.

ಉಡುಪಿ: ಕಾಪು ತಾಲೂಕಿನ ಕುತ್ಯಾರು ಸಮೀಪದ ಮೂಲೊಟ್ಟು ಗುತ್ತು ನಾಗಬನದಲ್ಲಿ ವರ್ಷಕ್ಕೊಮ್ಮೆ ತುಳುವಿನ ಬೇಷ ತಿಂಗಳಲ್ಲಿ ನಡೆಯುವ ಪರಿಶಿಷ್ಟವರ್ಗದ ನಾಗರಾಧನೆ ಪೂಜೆಯು ವಿಶಿಷ್ಟ ರೀತಿಯಲ್ಲಿ ನಡೆಯಿತು.

ವಿವಿಧ ಜಿಲ್ಲೆಗಳ ಪರಿಶಿಷ್ಟವರ್ಗದ ಮೊಗೇರ ಸಮುದಾಯದವರಿಂದ ಆರಾಧಿಸಲ್ಪಡುವ ಈ ನಾಗಬನದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುವುದು ಅನಾದಿ ಕಾಲದಿಂದ ನಡೆದುಬಂದ ಸಂಪ್ರದಾಯವಾಗಿದೆ. ನೈಸರ್ಗಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡ ಈ ವಿಶಿಷ್ಟ ನಾಗಬನದಲ್ಲಿ ನಾಗರಪಂಚಮಿಯಂತಹ ಪರ್ವದಿನದಲ್ಲಾಗಲೀ, ಭಕ್ತರು ಬಯಸಿದ ಇತರ ದಿನದಲ್ಲಾಗಲೀ ಪೂಜೆಗೆ ಅವಕಾಶವಿಲ್ಲ.

ಪರಿಶಿಷ್ಟ ವರ್ಗದ ಮೊಗೇರ ಸಮುದಾಯದ 16 ಬಳಿ ಸಾವಿರ ಮಾಗಣೆಯ ಪ್ರಧಾನ ನಾಗಬನವಾಗಿದ್ದು, ಈ ವಾರ್ಷಿಕ ಆರಾಧನೆ ಪುರಾತನ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದೆ. ಶಿರ್ವ ಸೊರ್ಪು ಶ್ರೀಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಗುರಿಕಾರರಿಗೆ ಮಾತ್ರ ಸನ್ನಿಧಿಯಲ್ಲಿ ತಂಪೆರೆಯುವ ಪೂಜೆ ಸಲ್ಲಿಸುವ ಅಧಿಕಾರವಿದೆ.

ಪುರಾತನ ಸಂಪ್ರದಾಯದಂತೆ ಕಾಸರಗೋಡಿನಿಂದ ಕಾರವಾರದವರೆಗಿನ ವಿವಿಧ ಜಿಲ್ಲೆಗಳಿಂದ ಬಂದ ಮೊಗೇರ ಸಮುದಾಯದ ಭಕ್ತರು ಬೆಳಿಗ್ಗೆ ಮೂಲೊಟ್ಟು ಗುತ್ತು ಮೂಲ ಮನೆಗೆ ತೆರಳಿ ಬಾವಿಯ ನೀರು ಕುಡಿದು ಪೂಜೆ ಸಲ್ಲಿಸಿದ ಬಳಿಕ ನಾಗಬನವನ್ನು ಶುಚಿಗೊಳಿಸಿ ಮಣ್ಣಿನ – ಮಡಕೆಯಲ್ಲಿ ತಯಾರಿಸುವ ನಾಗನ ಬಿಂಬದಲ್ಲಿ ನಾಗಾರಾಧನೆಯ ಪೂಜೆ ನಡೆಯುತ್ತದೆ.

Ad
Ad
Nk Channel Final 21 09 2023
Ad