Bengaluru 26°C
Ad

ಭಾರಿ ಮಳೆ : ಗೋಡೆ ಕುಸಿದು ಎರಡು ಕಾರು, ಒಂದು ಕೈಗಾಡಿಗೆ ಹಾನಿ

ಕರಾವಳಿಯಾದ್ಯಂತ ಕಳೆದ ನಾಲೈದು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು, ನದಿ, ತೋಡು ಮತ್ತು ಗದ್ದೆಗಳಲ್ಲಿ ನೀರು ಸರಾಗವಾಗಿ ಹರಿಯಲಾರಂಭಿಸಿದೆ. ಈ ನಡುವೆ ಸಾಂಪ್ರದಾಯಿಕ ಉಬರ್ ಫಿಶಿಂಗ್ ಕೂಡ ಜೋರಾಗಿ ನಡೆಯುತ್ತಿದೆ.

ಮಂಗಳೂರು: ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗ್ತಿದ್ದು,ಕರಾವಳಿಯ ನದಿಗಳ ನೀರಿನ ಮಟ್ಟವು ಏರಿಕೆಯಾಗ್ತಿದೆ.ಮಳೆ ಅವಾಂತರಕ್ಕೆ ಕೆಲವು ಕಡೆಗಳಲ್ಲಿ ಹಾನಿಸಂಭವಿಸುತ್ತಿದೆ.

ನಗರದ ಹೊರವಲಯ ದೇರಳಕಟ್ಟೆ ಯೇನೆಪೊಯ ಆಸ್ಪತ್ರೆ ಬಳಿ ಮರದ ಮಿಲ್ಲೊಂದರ ಆವರಣ ಗೋಡೆ ಕುಸಿದು ಎರಡು ಕಾರು ಮತ್ತು ಒಂದು ಕೈಗಾಡಿಗೆ ಹಾನಿಯಾದ ಘಟನೆ ಶನಿವಾರ ಸಂಜೆ ನಡೆದಿದ್ದು, ಘಟನೆಯ ಸಂದರ್ಭದಲ್ಲಿ ವಾಹನದಲ್ಲಿ ಯಾರೂ ಇಲ್ಲದ ಕಾರಣ ಮತ್ತು ಆವರಣ ಗೋಡೆ ಬದಿಯಲ್ಲಿ ಎರಡೇ ವಾಹನಗಳು ಇದ್ದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣಗೋಡೆ ಒದ್ದೆಯಾಗಿದ್ದು, ಎತ್ತರದ ಹಳೆ ಗೋಡೆಯಾಗಿದ್ದು, ಸಂಜೆ ವೇಳೆಗೆ ಕುಸಿದು ಬಿದ್ದಿದೆ. ಯೇನೆಪೆÇಯ ವೈದ್ಯರಿಗೆ ಸೇರಿದ ಕಾರು ಮತ್ತು ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಕೇರಳ ಮೂಲದವರ ಕಾರು ಸಂಪೂರ್ಣ ಹಾನಿಯಾಗಿದ್ದು, ಸ್ಥಳೀಯ ಬೇಲ್‍ಪುರಿ ಗಾಡಿ ಕಲ್ಲಿನಡಿಗೆ ಸಿಕ್ಕಿ ಸಂಪೂರ್ಣ ಹಾನಿಯಾಗಿದೆ.

Ad
Ad
Nk Channel Final 21 09 2023
Ad