ಬೆಳ್ತಂಗಡಿ: ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನಿಗ ಪೂಜೆ ಸಲ್ಲಿಸಿದ ನಂತರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದರು. ಸುಮಾರು ನಾಲ್ಕು ದಶಕಗಳಿಂದ ತಾನು ರಾಜಕಾರಣದಲ್ಲಿದ್ದೇನೆ ಮತ್ತು 25 ವರ್ಷಗಳ ಕಾಲ ಹೊಳೆನರಸೀಪುರದ ಶಾಸಕನಾಗಿ ಜನರ ಸೇವೆ ಮಾಡಿದ್ದೇನೆ, ತನಗೆ ಕಾನೂನಿನ ಮೇಲೆ ಗೌರವ ಇದೆ ಮತ್ತು ಧರ್ಮಸ್ಥಳದ ಮಂಜುನಾಥನ ಮೇಲೆ ನಂಬಿಕೆ ವಿಶ್ವಾಸ ಇದೆ ಎಂದು ರೇವಣ್ಣ ಹೇಳಿದರು.
ತಮ್ಮ ವಿರುದ್ಧ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾತಾಡಲು ಅವರು ಅನಾಸಕ್ತಿ ತೋರಿದರು. ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಕಾನೂನಿನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ತಾನು ಮಾತಾಡುವುದು ಕಾಮೆಂಟ್ ಮಾಡೋದು ಸರಿಯಲ್ಲ ಎಂದು ರೇವಣ್ಣ ಹೇಳಿದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ತನ್ನ ಮೇಲೆ ಗೌರವವಿದ್ದರೆ ಕೂಡಲೇ ಭಾರತಕ್ಕೆ ಬಂದು ತನಿಖಾಧಿಕಾರಿಗಳ ಮುಂದೆ ಹಾಜರಾಗು ಎಂದು ಪ್ರಜ್ವಲ್ ರೇವಣ್ಣಗೆ ಪತ್ರ ಬೆದಿರುವ ಬಗ್ಗೆಯೂ ರೇವಣ್ಣ ಮಾತಾಡಲು ಇಷ್ಟಪಡಲಿಲ್ಲ. ಪತ್ರದ ಬರೆದಿರುವ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಕಾರು ಹತ್ತಿ ತೆರಳಿದ್ದಾರೆ.