Bengaluru 30°C
Ad

ಗೂಗಲ್ ಪೇಗೆ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನೂ ಲಿಂಕ್ ಮಾಡುವುದು ಹೇಗೆ ?

ನಮ್ಮ ದೇಶ ವೇಗವಾಗಿ ಬೆಳೆಯುತ್ತಿದೆ ಜೊತೆಗೆ ಡಿಜಿಟಲೀಕರಣಗೊಳ್ಳುತ್ತಿದೆ. ಹಣದಿಂದ ಹಿಡಿದು ಎಲ್ಲವು ಆನ್ಲೈನ್ ನಲ್ಲಿ ನಡೆಯುತ್ತಿದೆ. ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ವ್ಯಾಪಾರಗಳವರೆಗೂ ಯುಪಿಐ ಪಾವತಿಗೆ ಅನುಮತಿಸಲಾಗಿದೆ.

ನಮ್ಮ ದೇಶ ವೇಗವಾಗಿ ಬೆಳೆಯುತ್ತಿದೆ ಜೊತೆಗೆ ಡಿಜಿಟಲೀಕರಣಗೊಳ್ಳುತ್ತಿದೆ. ಹಣದಿಂದ ಹಿಡಿದು ಎಲ್ಲವು ಆನ್ಲೈನ್ ನಲ್ಲಿ ನಡೆಯುತ್ತಿದೆ. ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ವ್ಯಾಪಾರಗಳವರೆಗೂ ಯುಪಿಐ ಪಾವತಿಗೆ ಅನುಮತಿಸಲಾಗಿದೆ.

ಈ ಆನ್ಲೈನ್ ವಹಿವಾಟಿನಲ್ಲಿ ಗೂಗಲ್ ಪೇ ನಮ್ಮ ದೇಶದ ಅತ್ಯಂತ ಜನಪ್ರಿಯ ಯುಪಿಐ ಅಪ್ಲಿಕೇಶನ್‌ಗಳಲ್ಲಿ ಒಂದು. ಈಗ ಇದು ಕೇವಲ ಯುಪಿಐ ಪಾವತಿಗೆ ಮಾತ್ರ ಸೀಮಿತವಾಗಿಲ್ಲ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನೂ ಸಹ ಇದಕ್ಕೆ ಲಿಂಕ್ ಮಾಡಬಹುದು. ಅವುಗಳ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿಗಳನ್ನು ಮಾಡಬಹುದು.

ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ಗೂಗಲ್ ಪೇ ಗೆ ನೀವೂ ಕೂಡ ಲಿಂಕ್ ಮಾಡಬಹುದು:

  • ಗೂಗಲ್ ಪ್ಲೇ  ಸ್ಟೋರ್‌ನಿಂದ ಗೂಗಲ್ ಪೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್​ ಮಾಡಿಕೊಳ್ಳಬೇಕು.
  • ನಿಮ್ಮ ಜಿಮೈಲ್ ಖಾತೆಯೊಂದಿಗೆ ಗೂಗಲ್ ಪೇ ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡಿ. ಅದರ ನಂತರ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
  • ಪಾವತಿ ವಿಧಾನಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ನೀವು ಕೆಳಗಿನ ಎಲ್ಲಾ ಆಯ್ಕೆಗಳನ್ನು ನೋಡುತ್ತೀರಿ.
    ಆ್ಯಡ್​ ಬ್ಯಾಂಕ್ ಖಾತೆ,ಯುಪಿಐ ಲೈಟ್ ಹೊಂದಿಸಿ, ಆ್ಯಡ್​ ಕ್ರೆಡಿಟ್ ಲೈನ್, ಯುಪಿಐನಲ್ಲಿ ರೂಪೇ ಕ್ರೆಡಿಟ್ ಕಾರ್ಡ್ ಸೇರಿಸಿ.
  • ನೀವು ಈ ವಿಭಾಗಕ್ಕೆ ಹೋಗಿ, ಪಾವತಿಸಲು ಇತರ ಮಾರ್ಗಗಳು ಮತ್ತು ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸೇರಿಸಿ. ಇದಕ್ಕಾಗಿ ಆ್ಯಡ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ.
  • ಆ್ಯಡ್ ಕಾರ್ಡ್ ಕ್ಲಿಕ್ ಮಾಡಿದ ನಂತರ, ಗೂಗಲ್ ಪೇ ಅಪ್ಲಿಕೇಶನ್ ಕ್ಯಾಮೆರಾ ತೆರೆಯುತ್ತದೆ. ಇದು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡುತ್ತದೆ.
  • ನಂತರ ಅದು ಸ್ವಯಂಚಾಲಿತವಾಗಿ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ತೆಗೆದುಕೊಳ್ಳುತ್ತದೆ.
    ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
  • ಈ ಒಟಿಪಿ ಅನ್ನು ನಮೂದಿಸಿ – ಗೂಗಲ್ ನಿಮ್ಮ ಕಾರ್ಡ್ ವಿವರಗಳನ್ನು ಪರಿಶೀಲಿಸುತ್ತದೆ.
  • ಗೂಗಲ್ ಪೇ ಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸೇರಿಸಿದರೆ, ನೀವು ಅಂಗಡಿಗಳಲ್ಲಿ ಏನ್ ಎಫ್ ಸಿ ಮೂಲಕ ಪಾವತಿಗಳನ್ನು ಮಾಡಬಹುದು
  • ನೀವು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳ ಮೂಲಕ ಪಾವತಿಗಳನ್ನು ಮಾಡಬಹುದು.

ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳು ಗೂಗಲ್ ಪೇ ಅನ್ನು ಪೂರ್ವ-ಸ್ಥಾಪಿತ ಅಪ್ಲಿಕೇಶನ್‌ನಂತೆ ಹೊಂದಿವೆ. ಐಫೋನ್ ಬಳಕೆದಾರರು ಪ್ಲೇಸ್ಟೋರ್‌ನಿಂದ ಜಿಪೇ ಡೌನ್‌ಲೋಡ್ ಮಾಡಿಕೊಳ್ಳಬೇಕು.

Ad
Ad
Nk Channel Final 21 09 2023
Ad