Bengaluru 24°C
Ad

ರೆಮಲ್ ಚಂಡಮಾರುತ ಎಫೆಕ್ಟ್: ಅಂಡಮಾನ್ ನಿಕೋಬಾರ್​ನಲ್ಲಿ ಕನ್ನಡಿಗರಿಗೆ  ಸಂಕಷ್ಟ

ರೆಮಲ್ ಚಂಡಮಾರುತ ಎಫೆಕ್ಟ್ ಹಿನ್ನೆಲೆ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಹೀಗಾಗಿ ಅಂಡಮಾನ್ ನಿಕೋಬಾರ್​ನಲ್ಲಿ ಸಿಲುಕಿದ ಕನ್ನಡಿಗರಿಗೆ  ಸಂಕಷ್ಟ ಎದುರಾಗಿದೆ.

ಚಿತ್ರದುರ್ಗ: ರೆಮಲ್ ಚಂಡಮಾರುತ ಎಫೆಕ್ಟ್ ಹಿನ್ನೆಲೆ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಹೀಗಾಗಿ ಅಂಡಮಾನ್ ನಿಕೋಬಾರ್​ನಲ್ಲಿ ಸಿಲುಕಿದ ಕನ್ನಡಿಗರಿಗೆ  ಸಂಕಷ್ಟ ಎದುರಾಗಿದೆ.

ರೆಮಲ್ ಚಂಡಮಾರುತ ಹಿನ್ನೆಲೆ ವಿಸ್ತಾರ ವಿಮಾನ ಯಾನ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಬೆಳಗ್ಗೆ 11ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 180 ಜನ ಸಂಜೆಯಾದರೂ ವಿಮಾನವಿಲ್ಲದೇ ಕಂಗಾಲಾಗಿದ್ದಾರೆ.

ಮೈಸೂರು, ದಾವಣಗೆರೆ ಸೇರಿ ವಿವಿಧೆಡೆಯಿಂದ ಅಂಡಮಾನ್ ನಿಕೋಬಾರ್​ಗೆ ಕನ್ನಡಿಗರು ತೆರಳಿದ್ದಾರೆ. ಅವರಿಗೆ ಆಹಾರ, ನೀರು ಸಹ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ವಿಮಾನಗಳ ವ್ಯತ್ಯಯದಿಂದ ಅಂಡಮಾನ್ ನಿಕೊಬಾರ್ ಪೋರ್ಟ್​​ ಬ್ಲೇರ್​ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ ಪೋರ್ಟ್ ಸಿಬ್ಬಂದಿ ಜತೆ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ವಾಗ್ವಾದ ಮಾಡಿದ್ದಾರೆ.

ರೆಮಲ್ ಚಂಡಮಾರುತದ ಎಫೆಕ್ಟ್‌ ಕರ್ನಾಟಕದ ಮೇಲೂ ಆಗಿದೆ. ಸೈಕ್ಲೋನ್‌ನಿಂದ ಪೂರ್ವ ಮುಂಗಾರು ಮಳೆ ಕಡಿಮೆಯಾಗಿದೆ. ಆದರೆ ಮೇ 30ರ ಬಳಿಕ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತೆ ಅಂತ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Ad
Ad
Nk Channel Final 21 09 2023
Ad