Bengaluru 24°C
Ad

ಅತ್ತಿಗೆಯಿಂದ ದೂರ ಇರು ಎಂದಿದ್ದಕ್ಕೆ ಮೈದುನನ್ನೆ ಕೊಂದ ಕಿರಾತಕ ಪ್ರಿಯಕರ

ತನ್ನ ಅತ್ತಿಗೆಯ ಜೊತೆಗಿನ ಅನೈತಿಕ ಸಂಬಂಧದಿಂದ ದೂರ ಇರು ಎಂದಿದ್ದಕ್ಕೆ ಅತ್ತಿಗೆ ಪ್ರಿಯಕರ ಮೈದುನನ್ನೆ ಕಲ್ಲಿನಿಂದ ಜಜ್ಜಿ ಕೊಂದಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ. ಹೀರಾಲಾಲ್ ಲದಾಫ್ (35) ಕೊಲೆಯಾದ ವ್ಯಕ್ತಿ.

ಕಲಬುರಗಿ: ತನ್ನ ಅತ್ತಿಗೆಯ ಜೊತೆಗಿನ ಅನೈತಿಕ ಸಂಬಂಧದಿಂದ ದೂರ ಇರು ಎಂದಿದ್ದಕ್ಕೆ ಅತ್ತಿಗೆ ಪ್ರಿಯಕರ ಮೈದುನನ್ನೆ ಕಲ್ಲಿನಿಂದ ಜಜ್ಜಿ ಕೊಂದಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ. ಹೀರಾಲಾಲ್ ಲದಾಫ್ (35) ಕೊಲೆಯಾದ ವ್ಯಕ್ತಿ.

ಹೀರಾಲಾಲ್‌ನ ಅತ್ತಿಗೆ ಜೊತೆ ರವಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಹೀರಾಲಾಲ್ ಅಣ್ಣ ಬಾಬು ಲದಾಫ್ ತನ್ನ ಪತ್ನಿಯಿಂದ ದೂರ ಇರುವಂತೆ ರವಿಗೆ ಹೇಳಿದ್ದ ಆದರೆ ಪತ್ನಿಯೇ ತನ್ನ ಪತಿಯ ಮೇಲೆ ಪ್ರಿಯಕರನಿಂದ ಹಲ್ಲೆ ಮಾಡಿಸಿದ್ದಳು.

ಅಣ್ಣನ ಸಂಸಾರವನ್ನು ಸರಿಪಡಿಸುವ ಉದ್ದೇಶದಿಂದ ರವಿಯನ್ನು ಅತ್ತಿಗೆಯಿಂದ ದೂರ ಇರುವಂತೆ ಹೇಳಿದ್ದ ಈ ಸಂಬಂಧ ಇಬ್ಬರ ನಡುವೆ ಆಗಾಗ ಗಲಾಟೆ ನಡೆದಿತ್ತು ಆದರೆ ಮೊನ್ನೆ ಕುಡಿದ ನಶೆಯಲ್ಲಿ ಹಿರೇಲಾಲ್‌ನನ್ನು ರವಿ ಕಲ್ಲಿನಿಂದ ಜಜ್ಜಿ ಮಾರಾಣಾಂತಿಕ ಹಲ್ಲೆ ನಡೆಸಿದ್ದ. ಗಂಭಿರ ಗಾಯಗೊಂಡ ಹಿರೇಲಾಲ್‌ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Ad
Ad
Nk Channel Final 21 09 2023
Ad