Bengaluru 21°C
Ad

ಇಸ್ರೇಲ್‌ ಪ್ರತೀಕಾರದ ದಾಳಿಗೆ 35 ಪ್ಯಾಲೆಸ್ತೀನೀಯರು ಬಲಿ

ಟೆಲ್‌ ಅವಿವ್:‌ ಇಸ್ರೇಲ್‌ನವಾಣಿಜ್ಯ ಕೇಂದ್ರವಾದ ಟೆಲ್ ಅವೀವ್‌ನಲ್ಲಿ “ದೊಡ್ಡ ರಾಕೆಟ್ ದಾಳಿ” ನಡೆಸಿರುವುದಾಗಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಹೇಳಿಕೊಂಡ ಗಂಟೆಗಳ ನಂತರ, ಇಸ್ರೇಲ್ ಮಿಲಿಟರಿ ದಕ್ಷಿಣ ಗಾಜಾ ಪಟ್ಟಿಯ ರಫಾದಲ್ಲಿ ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು.

ಟೆಲ್‌ ಅವಿವ್:‌ ಇಸ್ರೇಲ್‌ನವಾಣಿಜ್ಯ ಕೇಂದ್ರವಾದ ಟೆಲ್ ಅವೀವ್‌ನಲ್ಲಿ “ದೊಡ್ಡ ರಾಕೆಟ್ ದಾಳಿ” ನಡೆಸಿರುವುದಾಗಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಹೇಳಿಕೊಂಡ ಗಂಟೆಗಳ ನಂತರ, ಇಸ್ರೇಲ್ ಮಿಲಿಟರಿ ದಕ್ಷಿಣ ಗಾಜಾ ಪಟ್ಟಿಯ ರಫಾದಲ್ಲಿ ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು. ಭಾನುವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ 35 ಪ್ಯಾಲೆಸ್ಟೀನಿಯನ್ನರನ್ನು ಬಲಿ ಪಡೆದುಕೊಂಡಿದೆ.

Ad

ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ನೀಡಿದ ಹೇಳಿಕೆಯಲ್ಲಿ, “ಇಸ್ರೇಲ್‌ ದಾಳಿ 35 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಡಜನ್‌ಗಟ್ಟಲೆ ಜನ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು” ಎಂದು ಹೇಳಿದೆ. ರಫಾಹ್ ಬಳಿ ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ಏಜೆನ್ಸಿ ನಿರ್ವಹಿಸುತ್ತಿದ್ದ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ದಾಳಿಯನ್ನು “ಭಯಾನಕ ಹತ್ಯಾಕಾಂಡ” ಎಂದು ಹಮಾಸ್ ಮೀಡಿಯಾ ಕರೆದಿದೆ.

Ad
Ad
Ad
Nk Channel Final 21 09 2023